ಮಂಗಳೂರು:ಮೆಥಿಲೀನ್ ಡೈಆಕ್ಸಿ ಮೆಥಾಂಫೆಟಮೈನ್ ಎಂಬ ಮಾದಕ ವಸ್ತುವನ್ನು ಕೇರಳದ ಗಡಿಭಾಗದಿಂದ ಮಂಗಳೂರಿಗೆ ಮಾರಾಟ ಮಾಡಲು ಕಾರಿನಲ್ಲಿ ಹೊರಟಿದ್ದ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲದ ಮೇಲಂಗಡಿಯ ಅಬ್ದುಲ್ ರೆಹಮಾನ್ ಅರ್ಪಾನ್ ಯಾನೆ ಜಲ್ದಿ ಅರ್ಪಾನ್ (24), ಮಂಗಳೂರು ಬೋಳೂರಿನ ಅಬ್ದುಲ್ ಜಲೀಲ್ (42), ಬೋಳಿಯಾರ್ ಗ್ರಾಮದ ಮೊಹಮ್ಮದ್ ಮನ್ಸೂರ್, (29) ಬಂಧಿತರು.
ಕೇರಳದಿಂದ ಮಂಗಳೂರಿಗೆ ಮಾದಕವಸ್ತು ಸಾಗಣೆ, ಮೂವರ ಬಂಧನ - ಸಿಸಿಬಿ ಪೊಲೀಸರು
ಮೆಥಿಲೀನ್ ಡೈಆಕ್ಸಿ ಮೆಥಾಂಫೆಟಮೈನ್ (MDMA) ಎಂಬ ಮಾದಕ ವಸ್ತುವನ್ನು ಕೇರಳದಿಂದ ಮಂಗಳೂರಿಗೆ ಸಾಗಿಸುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿಗೆ ಮಾದಕವಸ್ತು ಸಾಗಿಸುತ್ತಿದ್ದ ಮೂವರ ಬಂಧನ
ಆರೋಪಿಗಳಿಂದ 32 ಗ್ರಾಂ ತೂಕದ ರೂ. 1,62,000 ಮೌಲ್ಯದ ಎಂಡಿಎಂಎ, 4 ಮೊಬೈಲ್ ಫೋನ್ ಗಳು, ಡಿಜಿಟಲ್ ತೂಕ ಮಾಪನ, ನಗದು 22,000 ಹಾಗೂ ಸಾಗಣೆಗೆ ಉಪಯೋಗಿಸಿದ ಮಾರುತಿ ಇಗ್ನಿಸ್ ಕಾರನ್ನು ವಶಕ್ಕೆ ಪಡೆಯಲಾಗಿದೆ.