ಮುಂಬೈ:ಉದ್ಯಮಿ ಮನ್ಸುಖ್ ಹಿರೇನ್ ಸಾವಿನ ಪ್ರಕರಣ ಸಂಬಂಧ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಮುಂಬೈನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶಂಕಿಸಿದೆ.
ಮನ್ಸುಖ್ರನ್ನು ಮೊದಲೇ ಕೊಂದು, ಅವರ ಬಾಯಿಗೆ ಕರವಸ್ತ್ರ ತುರುಕಿ ಕೊಲೆಗಾರರು ಮೃತದೇಹವನ್ನು ನದಿಗೆ ಎಸೆದಿದ್ದಾರೆ. ಯಾವಾಗ ದೇಹದೊಳಗೆ ನೀರು ಸಂಪೂರ್ಣ ತುಂಬಿ, ಊದಿಕೊಳ್ಳುತ್ತದೆಯೋ ಆಗ ಶವ ನದಿಯ ಮೇಲೆ ತೇಲುತ್ತದೆ. ಬಾಯಿಯೊಳಗೆ ಕರವಸ್ತ್ರ ತುರುಕಿದರೆ ದೇಹದೊಳಗೆ ಬೇಗ ನೀರು ಹೋಗುವುದಿಲ್ಲ. ಹೀಗಾಗಿ ಮೃತದೇಹ ಹೊರಗೆ ಕಾಣಲು ಇನ್ನೂ ಕೆಲವು ದಿನಗಳನ್ನು ತೆಗೆದುಕೊಳ್ಳುತ್ತದೆ ಎಂಬುದು ಕೊಲೆಗಾರರ ಪ್ಲಾನ್ ಆಗಿತ್ತು ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.