ಕರ್ನಾಟಕ

karnataka

ETV Bharat / crime

ಮಂಗಳೂರು ಸ್ಫೋಟ ಹಿನ್ನೆಲೆ: ನಂಬರ್ ಪ್ಲೇಟ್ ಇಲ್ಲದ 45 ಕ್ಕೂ ಹೆಚ್ಚು ವಾಹನಗಳ ಜಪ್ತಿ - ಪೊಲೀಸರು ಹೈ ಅಲರ್ಟ್

ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ನಗರದ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಗೋಪಾಲ ಬ್ಯಾಕೋಡ ನೇತೃತ್ವದಲ್ಲಿ ಪೊಲೀಸರು ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

ಮಂಗಳೂರು ಸ್ಫೋಟ ಹಿನ್ನೆಲೆ: ನಂಬರ್ ಪ್ಲೇಟ್ ಇಲ್ಲದ 45 ಕ್ಕೂ ಹೆಚ್ಚು ವಾಹನ ಜಪ್ತಿ
http://10.10.50.85:6060/reg-lowres/23-November-2022/kn-hbl-03-no-number-plate-sieze-av-7208089_23112022124730_2311f_1669187850_710.jpg

By

Published : Nov 23, 2022, 3:20 PM IST

ಹುಬ್ಬಳ್ಳಿ: ನಂಬರ್ ಪ್ಲೇಟ್ ಇಲ್ಲದೇ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿರುವ ಪೊಲೀಸರು, ಕಸಬಾಪೇಟೆ ಮತ್ತು ಹಳೇ ಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ 45ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ನಗರದ ಪೊಲೀಸರು ಹೈ ಆಲರ್ಟ್ ಆಗಿದ್ದಾರೆ. ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಗೋಪಾಲ ಬ್ಯಾಕೋಡ ನೇತೃತ್ವದಲ್ಲಿ ಪೊಲೀಸರು ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಅನೇಕ ದ್ವಿಚಕ್ರ ವಾಹನಗಳಲ್ಲಿ ಯಾವುದೇ ದಾಖಲೆಗಳು ಕೂಡ ಇಲ್ಲದೇ ಇವು ಅನುಮಾನಾಸ್ಪದವಾಗಿದ್ದವು‌. ಹಾಗಾಗಿ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಎಣ್ಣೆ ಏಟಲ್ಲಿ ನಂಬರ್‌ಪ್ಲೇಟ್ ಬದಲಿಸಿ ವಾಹನ ಕದ್ದು ಮಾರುತ್ತಿದ್ದ ಇಬ್ಬರ ಬಂಧನ

ABOUT THE AUTHOR

...view details