ಕರ್ನಾಟಕ

karnataka

By

Published : Sep 4, 2021, 7:24 PM IST

ETV Bharat / crime

ಉದ್ಯೋಗದ ಆಸೆ ತೋರಿಸಿ ಆರು ಮಂದಿ ವಿವಾಹವಾಗಿದ್ದ ಭೂಪ..ಮುಂದೇನಾಯ್ತು?

ಆರು ಮಂದಿಗೆ ಉದ್ಯೋಗ ಕೊಡಿಸುವುದಾಗಿ ವಂಚಿಸಿ, ಮದುವೆಯಾಗಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

Man with multiple marriages arrested from Jalpaiguri
ಉದ್ಯೋಗದ ಆಸೆ ತೋರಿಸಿ ಆರು ಮಂದಿಯನ್ನು ವಿವಾಹವಾಗಿದ್ದ ವ್ಯಕ್ತಿ ಸೆರೆ

ಜಲಪೈಗುರಿ(ಪಶ್ಚಿಮ ಬಂಗಾಳ):ವಂಚಿಸಿ, ಆರು ಮಹಿಳೆಯರನ್ನು ಮದುವೆಯಾಗಿದ್ದ ವ್ಯಕ್ತಿಯೊಬ್ಬನನ್ನು ಇಬ್ಬರು ಪತ್ನಿಯರು ರೆಡ್​​ ಹ್ಯಾಂಡಾಗಿ ಹಿಡಿದು, ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿ ನಡೆದಿದೆ.

ರಾಹುಲ್ ಸಿಂಗ್, ಬಂಧಿತ ವ್ಯಕ್ತಿಯಾಗಿದ್ದು, ಮಹಿಳೆಯರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ, ಅವರನ್ನು ಮದುವೆಯಾಗುತ್ತಿದ್ದನು. ಆರೂ ಮಂದಿಗೂ ಉದ್ಯೋಗ ಕೊಡಿಸುವ ಭರವಸೆ ನೀಡಿ, ಅವರನ್ನು ವಿವಾಹವಾಗಿದ್ದನು ಎಂದು ತಿಳಿದು ಬಂದಿದೆ.

ಬಿಹಾರದ ವೈಶಾಲಿ ಮೂಲದವನಾದ ರಾಹುಲ್ ಸಿಂಗ್, ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ನಿಯೋರಾ ಟೀ ಗಾರ್ಡನ್​​ನಲ್ಲಿ ಆರನೇ ಪತ್ನಿಯೊಂದಿಗೆ ವಾಸವಾಗಿದ್ದನು. ಆಗಸ್ಟ್ 29ರಂದು ಪಶ್ಚಿಮ ಬಂಗಾಳಕ್ಕೆ ಬಂದ ಇಬ್ಬರು ಪತ್ನಿಯರು, ರಾಹುಲ್​ ಸಿಂಗ್​ನನ್ನು ರೆಡ್​ಹ್ಯಾಂಡಾಗಿ ಹಿಡಿದಿದ್ದಾರೆ. ಇದೇ ವೇಳೆ, ರಾಹುಲ್ ಸಿಂಗ್​​ನನ್ನು ಮದುವೆಯಾಗಿರುವ ಬಗ್ಗೆ ದಾಖಲೆಗಳನ್ನು ಕೂಡಾ ತೋರಿಸಿದ್ದಾರೆ.

ನಂತರ ಸ್ಥಳೀಯವಾಗಿರುವ ಮಲ್ ಪೊಲೀಸ್ ಠಾಣೆಗೆ ಇಬ್ಬರೂ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ವಿಚಾರಣೆ ನಡೆಸಿದಾಗ ಸುಮಾರು 6 ಮಂದಿಯನ್ನು ಆತ ಮದುವೆಯಾಗಿರುವುದು ತಿಳಿದು ಬಂದಿದೆ. ಈಗ ವಂಚನೆ ಮತ್ತು ಇತರ ಆರೋಪಗಳ ಅಡಿ ರಾಹುಲ್ ಸಿಂಗ್ ವಿರುದ್ಧ ದೂರು ದಾಖಲಾಗಿದ್ದು, ಕೋರ್ಟ್​ ಮುಂದೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ವಿಚಾರಣೆಗೆ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ:ಅಸ್ಸೋಂನ ಆರು ಬಂಡುಕೋರ ಗುಂಪುಗಳೊಡನೆ ಶಾಂತಿ ಒಪ್ಪಂದ : ಗೃಹ ಸಚಿವ ಅಮಿತ್ ಶಾ

ABOUT THE AUTHOR

...view details