ಕರ್ನಾಟಕ

karnataka

ETV Bharat / crime

Watch: ಜಾನುವಾರು ವಿವಾದದಲ್ಲಿ ಥಳಿತಕ್ಕೊಳಗಾದ ಯುವಕ ಸಾವು

ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಯುವಕನೋರ್ವನನ್ನು ಕ್ರೂರವಾಗಿ ಥಳಿಸಿಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

Man murdered over cattle dispute in Ujjain
ಜಾನುವಾರು ವಿವಾದದಲ್ಲಿ ಥಳಿತಕ್ಕೊಳಗಾದ ಯುವಕ ಸಾವು

By

Published : May 30, 2021, 9:43 AM IST

Updated : May 30, 2021, 10:06 AM IST

ಉಜ್ಜೈನಿ (ಮಧ್ಯಪ್ರದೇಶ): ಜಾನುವಾರು ಸಾಕಣೆಯ ವಿವಾದದಲ್ಲಿ ಥಳಿತಕ್ಕೊಳಗಾದ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಉಜ್ಜೈನಿಯ ಲವ-ಕುಶ ನಗರದಲ್ಲಿ ನಡೆದಿದೆ. ಇಬ್ಬರು ವ್ಯಕ್ತಿಗಳು ಕ್ರೂರವಾಗಿ ಹೊಡೆಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಯುವಕನನ್ನು ಮನಬಂದಂತೆ ಥಳಿಸಿದ ವಿಡಿಯೋ

ಉಜ್ಜೈನಿಯ ಸಂತ ಬಾಲಿನಾಥ್ ನಗರದ ನಿವಾಸಿ ಗೋವಿಂದ್​​ (26) ಮೃತ ಯುವಕ. ಗೋವಿಂದ್ ಹಾಗೂ ಲವ-ಕುಶ ನಗರ ನಿವಾಸಿ ಅಶು ದಾಗರ್ ಇಬ್ಬರ ನಡುವೆ ಜಾನುವಾರು ಸಾಕಣೆ ವಿಚಾರದಲ್ಲಿ ಗಲಾಟೆಯಾಗಿದೆ. ಮೇ 28 ರಂದು ಈ ವಿಚಾರವನ್ನು ಮಾತನಾಡಿ ಬಗೆಹರಿಸಿಕೊಳ್ಳಲು ತನ್ನ ಮನೆ ಬಳಿ ಗೋವಿಂದ್​ನನ್ನು ಕರೆಯಿಸಿಕೊಂಡ ಅಶು ದಾಗರ್, ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಯುವಕನ ಮೇಲೆ ಹಲ್ಲೆ ನಡೆಸಿ ಮನಬಂದಂತೆ ಥಳಿಸಿದ್ದಾನೆ. ಗೋವಿಂದ್​ನನ್ನು ಚಿಕಿತ್ಸೆಗಾಗಿ ಇಂದೋರ್‌ಗೆ ಕರೆದೊಯ್ಯಲಾಯಿತು, ಆದರೆ ಗಂಭೀರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಘಟನೆ ವೇಳೆ ಗೋವಿಂದ್​ನ ಜೊತೆಯಿದ್ದ ಸ್ನೇಹಿತ ಸೂರಜ್​ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಆರೋಪಿಗಳ ಹೆಸರನ್ನು ಆತ ಹೇಳಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಸೂರಜ್ ಹೇಳಿಕೆ ಹಾಗೂ ವೈರಲ್ ವಿಡಿಯೋ ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿರುವುದಾಗಿ ಎಎಸ್ಪಿ ಅಮರೇಂದ್ರ ಸಿಂಗ್ ತಿಳಿಸಿದ್ದಾರೆ.

Last Updated : May 30, 2021, 10:06 AM IST

ABOUT THE AUTHOR

...view details