ಕರ್ನಾಟಕ

karnataka

ETV Bharat / crime

ಟೆರೇಸ್​​ನಿಂದ ಜಿಗಿದ ಪತಿ.. ಕಾಪಾಡಲು ಬಂದ ಪತ್ನಿ ಸಾವು.. ಗಾಯಗೊಂಡ ಗಂಡ ಆಸ್ಪತ್ರೆಗೆ ದಾಖಲು! - ಪತ್ನಿ ಜತೆ ಜಗಳವಾಡಿಕೊಂಡಿದ್ದ ಸಂದೀಪ್​​

ಉತ್ತರಪ್ರದೇಶದಲ್ಲಿ ಟೆರೇಸ್​ನಿಂದ ಜಿಗಿದ ವ್ಯಕ್ತಿ: ಪತ್ನಿ ಜತೆ ಜಗಳವಾಡಿಕೊಂಡಿದ್ದ ಸಂದೀಪ್​​, ಕೋಪದಲ್ಲಿ ಟೆರೇಸ್​ನಿಂದ ಜಿಗಿದಿದ್ದಾನೆ. ಇದೇ ವೇಳೆ ಗಂಡನನ್ನು ಟೆರೇಸ್​ನಿಂದ ಜಿಗಿಯದಂತೆ ಹಿಡಿಯಲು ಬಂದ ಪತ್ನಿ ರೋಲಿ ಜೋಲಿ ಸಾಲದೇ ಆತನೊಂದಿಗೆ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸಂದೀಪ್​ ಗಂಭೀರವಾಗಿ ಗಾಯಗೊಂಡಿದ್ದು,ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್​ ಉಪ ಆಯುಕ್ತರು ಮಾಹಿತಿ ನೀಡಿದ್ದಾರೆ.

UP: Man jumps off terrace, wife dies while trying to save him
ಟೆರೇಸ್​​ನಿಂದ ಜಿಗಿದ ಪತಿ.. ಕಾಪಾಡಲು ಬಂದ ಪತ್ನಿ ಸಾವು.. ಗಾಯಗೊಂಡ ಗಂಡ ಆಸ್ಪತ್ರೆಗೆ ದಾಖಲು!

By

Published : Dec 9, 2022, 9:54 AM IST

ಲಖನೌ( ಉತ್ತರಪ್ರದೇಶ):ತಮ್ಮದೇ ನಿವಾಸದ ಮೇಲಿನ ಮಹಡಿಯಿಂದ ಜಿಗಿದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನು ಮಹಡಿಯಿಂದ ಜಿಗಿಯುತ್ತಿದ್ದ ಗಂಡನನ್ನು ಉಳಿಸಲು ಹೋದ ಪತ್ನಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶ ರಾಜಧಾನಿ ಲಖನೌದ ಗಣೇಶ್​ ಗಂಜ್​​ನಲ್ಲಿ ನಡೆದಿದೆ.

ಗಣೇಶ್‌ಗಂಜ್‌ನ ಸಂದೀಪ್ (30) ರಾತ್ರಿ 9 ಗಂಟೆ ಸುಮಾರಿಗೆ ಕುಡಿದ ಅಮಲಿನಲ್ಲಿ ಮನೆಗೆ ಮರಳಿದ್ದ, ಈ ವೇಳೆ ಮಹಡಿ ಮೇಲಿಂದ ಜಿಗಿದಿದ್ದಾನೆ ಎಂದು ಕೇಂದ್ರ ವಲಯದ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ರಾಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ. ಸಂದೀಪ್​​​​​ ತನ್ನ ಪತ್ನಿ ರೋಲಿ ಜೊತೆ ಜಗಳವಾಡಿದ್ದ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ:ಪತ್ನಿ ಜತೆ ಜಗಳವಾಡಿಕೊಂಡಿದ್ದ ಸಂದೀಪ್​​, ಕೋಪದಲ್ಲಿ ಟೆರೇಸ್​ನಿಂದ ಜಿಗಿದಿದ್ದಾನೆ. ಇದೇ ವೇಳೆ ಗಂಡನನ್ನು ಟೆರೇಸ್​ನಿಂದ ಜಿಗಿಯದಂತೆ ಹಿಡಿಯಲು ಬಂದ ಪತ್ನಿ ರೋಲಿ ಜೋಲಿ ಸಾಲದೇ ಆತನೊಂದಿಗೆ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾಳೆ. ಘಟನೆಯಲ್ಲಿ ಸಂದೀಪ್​ ಗಂಭೀರವಾಗಿ ಗಾಯಗೊಂಡಿದ್ದು,ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್​ ಉಪ ಆಯುಕ್ತರು ಮಾಹಿತಿ ನೀಡಿದ್ದಾರೆ.

ಇಬ್ಬರು ಜಗಳ ಮಾಡಿ ಟೆರೇಸ್​ನಿಂದ ಜಿಗಿಯುತ್ತಿದ್ದಂತೆ ಮಕ್ಕಳ ಆಕ್ರಂದನ ಕೇಳಿ ಸ್ಥಳೀಯರು ಸ್ಥಳಕ್ಕೆ ಆಗಮಿಸಿ, ದಂಪತಿಯನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ರೋಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಸಂದೀಪ್ ನನ್ನು ಕೆಜಿಎಂಯುನ ಟ್ರಾಮಾ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನು ಓದಿ:ನಿಶ್ಚಿತಾರ್ಥವಾಗಿದ್ದ ಅಪ್ರಾಪ್ತೆಯ ಅತ್ಯಾಚಾರ, ಕೊಲೆ; ಬಳಿಕ ಯುವಕನೂ ಆತ್ಮಹತ್ಯೆ

ABOUT THE AUTHOR

...view details