ಕರ್ನಾಟಕ

karnataka

ETV Bharat / crime

ಒಂದು ಸುಳ್ಳು, ಸಾವು ಮತ್ತು ಡಿಎನ್​ಎ.. 9 ತಿಂಗಳ ನಂತ್ರ ಕಳ್ಳತನ ಪ್ರಕರಣದ ಆರೋಪಿ ಅರೆಸ್ಟ್ - 9 ತಿಂಗಳ ನಂತ್ರ ಕಳ್ಳತನ ಪ್ರಕರಣದ ಆರೋಪಿ ಅರೆಸ್ಟ್

ಕಳ್ಳತನ ಆರೋಪಿಯೋರ್ವನ ಒಂದು ಮಹಾ ಸುಳ್ಳು ಬರೋಬ್ಬರಿ 9 ತಿಂಗಳ ಬಳಿಕ ಬಯಲಾಗಿದೆ. ಸಾವಿನ ಬಗ್ಗೆ ಸುಳ್ಳು ಕಥೆ ಕಟ್ಟಿದವನ ಬಣ್ಣ ಕೊನೆಗೂ ಗೊತ್ತಾಗಿ ಈಗ ಕಂಬಿ ಎಣಿಸುವಂತಾಗಿರುವ ಪ್ರಕರಣ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

Man fakes his death
ಸಾವಿನ ಕುರಿತು ಸುಳ್ಳು ಕಥೆ ಕಟ್ಟಿದ ವ್ಯಕ್ತಿ

By

Published : May 9, 2022, 7:36 PM IST

ಛತರಪುರ್​(ಮಧ್ಯಪ್ರದೇಶ): ಕಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿಯನ್ನು ಸಾವನ್ನಪ್ಪಿದ 9 ತಿಂಗಳ ಬಳಿಕ ಪೊಲೀಸರು ಬಂಧಿಸಿರುವ ವಿಚಿತ್ರ ಪ್ರಕರಣ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಅರೇ.. ಇದೇನಿದು ಸತ್ತೋಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು ಹೇಗೆ ಅಂತಾ ಅಚ್ಚರಿ ಆಯ್ತಾ?

ಹೌದು, ಇದು ಖಂಡಿತ ಅಚ್ಚರಿ ಆಗುವಂತಹ ಪ್ರಕರಣವೇ..! ವ್ಯಕ್ತಿಯೋರ್ವ 9 ತಿಂಗಳ ಹಿಂದೆ ಮೃತಪಟ್ಟಿದ್ದ. ಬಳಿಕ ಕುಟುಂಬಸ್ಥರು ಆತನೇ ತಮ್ಮ ಸಂಬಂಧಿ ಎಂದು ತಿಳಿದು ಅಪರಿಚಿತ ವ್ಯಕ್ತಿಯ ಮೃತದೇಹಕ್ಕೆ ಅಂತ್ಯಸಂಸ್ಕಾರ ಮಾಡಿ ಎಲ್ಲಾ ವಿಧಿ ವಿಧಾನಗಳನ್ನು ಸಹ ನೆರವೇರಿಸಿದ್ದರು. ಆದ್ರೆ ಡಿಎನ್​ಎ ಪರೀಕ್ಷೆಯ ವರದಿ ಬಂದಾಗ ಮೃತನಿಗೂ ಆ ಕುಟುಂಬಕ್ಕು ಹೋಲಿಕೆ ಆಗಿಲ್ಲ ಅನ್ನುವ ಸತ್ಯ ಹೊರಬಿದ್ದಿದೆ.

6. 65 ಲಕ್ಷ ರೂ. ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ.. ಪಿಕಪ್​ ವಾಹನದ ಚಾಲಕನಾಗಿದ್ದ ಸುನೀಲ್​ ನಾಮ್ದಿಯೊ ಅಂದು ರಾಜನಗರದಲ್ಲಿ ಕಬ್ಬಿಣದ ರಾಡ್​ಗಳನ್ನು ವ್ಯಾಪಾರಿಯೊಬ್ಬರಿಗೆ ಸಾಗಿಸಿ 6. 65 ಲಕ್ಷ ರೂಪಾಯಿ ಹಣವನ್ನು ಪಡೆದ ಬಳಿಕ ನಾಪತ್ತೆಯಾಗಿದ್ದ. ಜುಲೈ 16, 2021 ರಂದು ವ್ಯಾಪಾರಿ ಸುಧೀರ್​ ಅಗರ್​ವಾಲ್​ ಈ ಸಂಬಂಧ ಬಮಿತಾ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ನಂತರ ಗೊಡೌನ್​ ಬಳಿ ಸುನೀಲನ​ ವಾಹನ ಪತ್ತೆಯಾಗಿತ್ತು.

ಕುಟುಂಬಸ್ಥರಿಂದ ಅಂತ್ಯಸಂಸ್ಕಾರ.. ಜುಲೈ 24, 2021 ರಂದು ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿತ್ತು. ಇದು ಸುನೀಲ್​ ಶವ ಎಂದು ಆತನ ಕುಟುಂಬಸ್ಥರು ಗುರುತಿಸಿ ಅಂತಿಮ ವಿಧಿ -ವಿಧಾನಗಳನ್ನು ಸಹ ನೆರವೇರಿಸಿದ್ದರು. ಈ ಕುರಿತು ಪೊಲೀಸರು ತನಿಖೆ ನಡೆಸಿದಾಗ ಮೃತ ವ್ಯಕ್ತಿಯೊಂದಿಗೆ ಆತನ ಕುಟುಂಬಸ್ಥರ ಡಿಎನ್​ಎ ಹೊಂದಿಕೆ ಆಗದಿರುವುದನ್ನು ಸುನೀಲ್​ ಕುಟುಂಬಸ್ಥರಿಗೆ ತಿಳಿಸಿದಾಗ ಅವರು ಸಹ ಬೆಚ್ಚಿಬಿದ್ದಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಮನಮೋಹನ್​ ಸಿಂಗ್​ ಬಾಘೇಲ್​ ತಿಳಿಸಿದ್ದಾರೆ.

ವರ್ಷದ ಬಳಿಕ ವ್ಯಾಪಾರಿ ಕಣ್ಣಿಗೆ ಬಿದ್ದ ಸುನೀಲ್​.. ಕಳೆದ ವರ್ಷ ಮೃತಪಟ್ಟಿದ್ದ ಎಂದು ನಂಬಲಾದ ಸುನೀಲ್​ ಇತ್ತೀಚೆಗೆ ಮೇ 3ರಂದು ಗಧಾ ತಿಗದ್ದಾ ಪ್ರದೇಶದಲ್ಲಿರುವ ಬಾಘೇಶ್ವರ್​ ಧಾಮ್​ ದೇವಸ್ಥಾನದಲ್ಲಿ ವ್ಯಾಪಾರಿ ಅಗರ್​ವಾಲ್​ ಕಣ್ಣಿಗೆ ಬಿದ್ದಿದ್ದ. ​ಆಗ ತನ್ನ ಹಣವನ್ನು ಕೊಡುವಂತೆ ಸುನೀಲ್​ಗೆ ಅಗರ್​ವಾಲ್​ ಕೇಳಿದ್ದರು. ಆದ್ರೆ ತಾನು ಈಗಾಗಲೇ ಪೊಲೀಸ್​ ದಾಖಲೆ ಪ್ರಕಾರ ಸತ್ತುಹೋಗಿದ್ದು, ಯಾವುದೇ ರೀತಿಯ ಹಣವನ್ನು ಕೊಡಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಿದ್ದ.

ಮತ್ತೆ ಪೊಲೀಸರ​ ಮೊರೆ ಹೋದ ವ್ಯಾಪಾರಿ.. ಸುನೀಲ್​ ಬದುಕಿದ್ದು, ಹಣ ಕೇಳಿದ್ರೆ ತನಗೆ ಬೆದರಿಕೆ ಹಾಕಿದ್ದಾನೆ ಎಂದು ಅಗರ್​ವಾಲ್​ ಅವರು ಪೊಲೀಸ್​ ಠಾಣೆ ಮೆಟ್ಟಿಲೇರಿದರು. ತಕ್ಷಣ ದೂರು ದಾಖಲಿಸಿಕೊಂಡು, ತನಿಖಾ ತಂಡ ರಚಿಸಿ ಕಾರ್ಯಾಚರಣೆಗಿಳಿದ ಪೊಲೀಸರು ಸುನೀಲ್​ನನ್ನು ಬಂಧಿಸಿದ್ದಾರೆ. ಆತನಿಂದ 5 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿರುವುದಾಗಿ ಪೊಲೀಸ್​ ಅಧಿಕಾರಿ ಬಾಘೇಲ್​ ಅವರು ಒಂದು ಸುಳ್ಳು ಸಾವಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ- ಹಾಡಹಗಲೇ ಪುತ್ತೂರು ಬಸ್​ ನಿಲ್ದಾಣದಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ.. ಆರೋಪಿ ಪೊಲೀಸ್​ ವಶಕ್ಕೆ

For All Latest Updates

TAGGED:

ABOUT THE AUTHOR

...view details