ತೋಟದ ಮನೆಯಲ್ಲಿ ಒಣ ಗಾಂಜಾ ಸಂಗ್ರಹಿಸಿಟ್ಟಿದ್ದ ವ್ಯಕ್ತಿ ಬಂಧನ - ಚಾಮರಾಜನಗರ
ತನ್ನ ತೋಟದ ಮನೆಯಲ್ಲಿ ಅಕ್ರಮವಾಗಿ ಒಣ ಗಾಂಜಾ ಸಂಗ್ರಹಿಸಿಟ್ಟಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಕೊಳ್ಳೇಗಾಲ(ಚಾಮರಾಜನಗರ): ಅಕ್ರಮವಾಗಿ ತೋಟದ ಮನೆಯಲ್ಲಿ ಒಣಗಾಂಜಾ ಸಂಗ್ರಹಿಸಿಟ್ಟಿದ್ದ ಖತರ್ನಾಕ್ ವ್ಯಕ್ತಿಯೋರ್ವನನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಹನೂರು ಸಮೀಪದ ಶಾಗ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪುಷ್ಪಪುರ ಗ್ರಾಮದ ನಿವಾಸಿ ಕಬ್ಬಾಲ್ ಎಂಬಾತ ತನ್ನ ತೋಟದ ಮನೆಯಲ್ಲಿ ಅಕ್ರಮವಾಗಿ ಒಣ ಗಾಂಜಾವನ್ನು ಸಂಗ್ರಹಿಸಿಟ್ಟಿದ್ದ. ಈ ಬಗ್ಗೆ ಖಚಿತ ಮಾಹಿತಿ ತಿಳಿದ ಅಬಕಾರಿ ನಿರೀಕ್ಷಕರಾದ ಮೀನಾ ಅವರಿದ್ದ ತಂಡ ಸೆ.29 ರ ತಡರಾತ್ರಿ 1.30 ರಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ದಾಳಿ ವೇಳೆ ಸಂಗ್ರಹಿಸಿಟ್ಟಿದ್ದ 4 ಕೆಜಿ 935 ಗ್ರಾಂ ಒಣಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.