ಕರ್ನಾಟಕ

karnataka

ETV Bharat / crime

ಒಂದೂವರೆ ವರ್ಷದ ಕಂದನನ್ನು ಕತ್ತು ಹಿಸುಕಿ ಕೊಂದ ಮಲತಂದೆ! - ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆ

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಮಲತಂದೆಯು ಒಂದೂವರೆ ವರ್ಷದ ಕಂದಮ್ಮನನ್ನ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

Stepfather kills toddler after assaulting her mother
ಒಂದೂವರೆ ವರ್ಷದ ಕಂದಮ್ಮನನ್ನ ಕತ್ತು ಹಿಸುಕಿ ಕೊಂದ ಮಲತಂದೆ

By

Published : May 22, 2021, 2:30 PM IST

ಔರಂಗಾಬಾದ್(ಮಹಾರಾಷ್ಟ್ರ): ಕೌಟುಂಬಿಕ ಕಲಹಕ್ಕೆ ಅಂಬೆಗಾಲಿಡುವ ಮಗುವೊಂದು ಬಲಿಯಾಗಿದೆ. ಒಂದೂವರೆ ವರ್ಷದ ಕಂದಮ್ಮನನ್ನ ಕತ್ತು ಹಿಸುಕಿ ಮಲತಂದೆ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಗಂಗಾಪುರ ತಾಲೂಕಿನ ಭೆಂಡಾಲ ಗ್ರಾಮದ ಕರಣ್ ಭೋನ್ಸ್ಲೆ ಕ್ಷುಲ್ಲಕ ವಿಷಯಕ್ಕೆ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಹೆಂಡತಿ ಮೇಲೆ ಹಲ್ಲೆ ಮಾಡಿದ್ದಾನೆ. ಕೋಪಗೊಂಡ ಪತ್ನಿ, ತನ್ನ ಮೊದಲನೇ ಪತಿಗೆ ಜನಿಸಿದ್ದ ಹೆಣ್ಣು ಮಗುವನ್ನು ಬಿಟ್ಟು ತವರು ಮನೆಗೆ ಹೋಗಿದ್ದಾಳೆ.

ಇದನ್ನೂ ಓದಿ: ಮಗನ ತುಂಟಾಟಕ್ಕೆ ಬೇಸತ್ತು ಬೆಲ್ಟ್​ನಲ್ಲಿ ಹೊಡೆದು ಸಾಯಿಸಿದ ಮಲತಂದೆ

ಮೊದಲೇ ಕೋಪದಲ್ಲಿದ್ದ ಕರಣ್, ಮಗು ಅಳಲು ಆರಂಭಿಸಿದಾಗ ಅದನ್ನು ಜಮೀನಿಗೆ ಕರೆದೊಯ್ದಿದ್ದಾನೆ. ಬಳಿಕ ಕತ್ತು ಹಿಸುಕಿ ಕೊಂದು, ಅಲ್ಲಿಯೇ ಹೂತು ಹಾಕಿದ್ದಾನೆ. ನಂತರ ಆರೋಪಿಯೇ ಪೊಲೀಸರ ಬಳಿ ಶರಣಾಗಿದ್ದಾನೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದ್ದು, ಮಗುವಿನ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷಗೆ ರವಾನಿಸಿದ್ದಾರೆ.

ABOUT THE AUTHOR

...view details