ಕರ್ನಾಟಕ

karnataka

ETV Bharat / crime

ಅಂಬಾಲ-ದೆಹಲಿ ಹೈವೇನಲ್ಲಿ 2 ಬಸ್‌ಗಳ ನಡುವೆ ಭೀಕರ ಅಪಘಾತ ; ಐವರು ಸಾವು, 10 ಮಂದಿಗೆ ಗಾಯ - Five killed in accident on Ambala Delhi highway

ರಾಷ್ಟ್ರ ರಾಜಧಾನಿ ದೆಹಲಿಯತ್ತ ಹೋಗುತ್ತಿದ್ದ ಬಸ್‌ಗೆ ಹಿಂಬದಿಯಿಂದ ಬಂದ ಮತ್ತೊಂದು ಬಸ್‌ ಡಿಕ್ಕಿ ಹೊಡೆದಿದೆ. ಎರಡು ಬಸ್‌ಗಳಿಗೆ ಹಾನಿಯಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಎಎಸ್‌ಐ ನರೇಶ್‌ ಮಾಹಿತಿ ನೀಡಿದ್ದಾರೆ..

Five killed, 10 others injured in accident on Ambala-Delhi highway
ಅಂಬಾಲ-ದೆಹಲಿ ಹೈವೇನಲ್ಲಿ 2 ಬಸ್‌ಗಳ ನಡುವೆ ಭೀಕರ ಅಪಘಾತ; ಐವರು ಸಾವು, 10 ಮಂದಿಗೆ ಗಾಯ

By

Published : Dec 27, 2021, 12:05 PM IST

ಮುಂಬೈ :ಹೋಗುತ್ತಿದ್ದ ಬಸ್‌ಗೆ ಹಿಂದಿನಿಂದ ಬಂದ ಮತ್ತೊಂದು ಬಸ್‌ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಹರಿಯಾಣದ ಅಂಬಾಲ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಹೀಲಿಂಗ್‌ ಟಚ್‌ ಆಸ್ಪತ್ರೆಯ ಸಮೀಪದಲ್ಲಿ ಮುಂಜಾನೆ ದುರಂತ ಸಂಭವಿಸಿದೆ. ದುರಂತದಲ್ಲಿ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯತ್ತ ಹೋಗುತ್ತಿದ್ದ ಬಸ್‌ಗೆ ಹಿಂಬದಿಯಿಂದ ಬಂದ ಮತ್ತೊಂದು ಬಸ್‌ ಡಿಕ್ಕಿ ಹೊಡೆದಿದೆ. ಎರಡು ಬಸ್‌ಗಳಿಗೆ ಹಾನಿಯಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಎಎಸ್‌ಐ ನರೇಶ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಛತ್ತೀಸ್‌ಗಢ ಎನ್‌ಕೌಂಟರ್‌: ನಾಲ್ವರು ಮಹಿಳೆಯರು ಸೇರಿ 6 ಮಾವೋವಾದಿಗಳ ಹತ್ಯೆ

For All Latest Updates

TAGGED:

ABOUT THE AUTHOR

...view details