ವಾಶಿಮ್, ಮಹಾರಾಷ್ಟ್ರ: ಟ್ರಕ್ನಲ್ಲಿ ಸಾಗಿಸುತ್ತಿದ್ದ ಸುಮಾರು 3.45 ಕೋಟಿ ರೂಪಾಯಿ ಮೌಲ್ಯದ 1,150 ಕೆಜಿ ಗಾಂಜಾವನ್ನು ಸೋಮವಾರ ಮಹಾರಾಷ್ಟ್ರ ಪೊಲೀಸರು ಜಪ್ತಿ ಮಾಡಿದ್ದಾರೆ.
ವಾಶಿಮ್ ಜಿಲ್ಲೆಯ ರಿಸೋದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಟ್ರಕ್ ಹಿಂಗೋಲಿ, ರಿಸೋದ್ ರಸ್ತೆಯಲ್ಲಿ ಸಂಚರಿಸುವ ವೇಳೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ವಾಶಿಮ್ ಪೊಲೀಸ್ ವರಿಷ್ಠಾಧಿಕಾರಿ ಬಚ್ಚನ್ ಸಿಂಗ್ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಗಾಂಜಾ ಆಂಧ್ರ ಪ್ರದೇಶದಿಂದ ಇತರ ರಾಜ್ಯಗಳಿಗೆ ರಫ್ತಾಗುತ್ತಿತ್ತು ಎಂದು ಬಚ್ಚನ್ ಸಿಂಗ್ ಮಾಹಿತಿ ನೀಡಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.
ಇದನ್ನೂ ಓದಿ:200ಕ್ಕೂ ಹೆಚ್ಚು ಬಂಡುಕೋರರಿಂದ ಗುಂಡಿನ ದಾಳಿ, 43 ಮಂದಿ ನಾಗರಿಕರ ಸಾವು