ಭೋಪಾಲ್(ಮಧ್ಯಪ್ರದೇಶ್):ವಿವಾದಾತ್ಮಕ ಹೇಳಿಕೆಗಳೊಂದಿಗೆ ಸುದ್ದಿಯಲ್ಲಿರುವ ವೈರಾಗ್ಯಾನಂದ ಗಿರಿ ಮಹಾರಾಜ್ ಅಲಿಯಾಸ್ ಮಿರ್ಚಿ ಬಾಬಾನನ್ನು ಅತ್ಯಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ. ಇದೀಗ ಆರೋಪಿಯನ್ನು ಆಗಸ್ಟ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರೈಸನ್‌ನ ಮಹಿಳೆಯೊಬ್ಬರು ಭೋಪಾಲ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಬಾನ ವಿರುದ್ಧ ಕೇಸು ದಾಖಲಿಸಿದ್ದರು.
ಸೋಮವಾರ ರಾತ್ರಿ ಗ್ವಾಲಿಯರ್‌ನ ಹೋಟೆಲ್‌ನಲ್ಲಿ ಬಾಬಾನನ್ನು ಬಂಧಿಸಿ ಭೋಪಾಲ್‌ಗೆ ಕರೆತಂದಿದ್ದು, ಪ್ರಸ್ತುತ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರು ಆತನ ಮೊಬೈಲ್ ಜಪ್ತಿ ಮಾಡಿದ್ದು, ಅದರಲ್ಲಿ ಹಲವು ಮಹಿಳೆಯರ ದೂರವಾಣಿ ಸಂಖ್ಯೆಗಳು ಮತ್ತು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376, 506 ಮತ್ತು 342 ರ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.