ಯಮುನಾನಗರ (ಹರಿಯಾಣ): ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. 12 ವರ್ಷಗಳ ಹಿಂದೆ ಪ್ರೀತಿ ಮದುವೆಯಾದ ವಿಧವೆಯೊಬ್ಬರು ತನಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಗಂಡನ ಮನೆಯವರು ಒತ್ತಡ ಹೇರುತ್ತಿದ್ದಾರೆ. ಮತಾಂತರವಾಗದಿದ್ದರೆ ಮನೆಯಿಂದ ಹೊರಹಾಕುವ ಹಾಗೂ ಜೀವ ಬೆದರಿಕೆ ಹಾಕಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮಹಿಳೆ ಆರೋಪವೇನು?:ಇಲ್ಲಿನ ಬಿಲಾಸ್‌ಪುರದ ನಿವಾಸಿಯಾದ ಮಹಿಳೆಗೆ 2006ರಲ್ಲಿ ಮೊದಲ ಮದುವೆಯಾಗಿತ್ತು. ಆದರೆ, ಮೊದಲ ಗಂಡ ಸಾವನ್ನಪ್ಪಿದ್ದು, ಈ ದಾಂಪತ್ಯಕ್ಕೆ ಒಂದು ಒಬ್ಬ ಮಗನಿದ್ದಾನೆ. ಮೊದಲ ಗಂಡನ ಸಾವಿನ ಬಳಿಕ ಈಕೆಯನ್ನು ಸಂಬಂಧಿಕರು ಮನೆಯಿಂದ ಹೊರಹಾಕಿದ್ದರು. ಅದರ ನಂತರ ಈಕೆ ಶಾಲೆಯೊಂದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಳು.
ಈ ನಡುವೆ 2011ರಲ್ಲಿ ಇದೇ ಶಾಲೆಯ ಬಸ್ಸಿನ ಚಾಲಕನ ಜೊತೆಗೆ ಸಂಬಂಧ ಬೆಳೆದಿತ್ತು. ಅಲ್ಲಿಂದ ಇಬ್ಬರು ಒಪ್ಪಿ 2012ರಲ್ಲಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಆದರೆ, ಮದುವೆ ವೇಳೆ ಈತ ತನ್ನ ಹೆಸರನ್ನು ಅಮನ್ ರಾಣಾ ಎಂದು ಹೇಳಿದ್ದ ಎಂದು ಮಹಿಳೆ ದೂರಿದ್ದಾಳೆ.
ಮದುವೆಯಾದ ಕೆಲವು ತಿಂಗಳ ನಂತರ ಗಂಡನ ಮನೆಗೆ ಹೋದಾಗ ಆತನ ಹೆಸರು ಅಮನ್ ರಾಣಾ ಅಲ್ಲ ಅಕ್ರಮ್ ಖಾನ್ ಎಂದು ತಿಳಿಯಿತು. ಅಲ್ಲದೇ, ಗಂಡನ ಕುಟುಂಬಸ್ಥರು ಮಾಂಸಾಹಾರ ಅಡುಗೆ ಮಾಡುವಂತೆಯೂ ನನಗೆ ಬಲವಂತ ಮಾಡುತ್ತಿದ್ದರು. ಈ ದಾಂಪತ್ಯದಿಂದ ಒಬ್ಬ ಮಗಳು ಮತ್ತು ಒಬ್ಬ ಮಗನಿದ್ದು, ಇಬ್ಬರು ಮಕ್ಕಳಿಗೂ ಬಲವಂತವಾಗಿ ಇಸ್ಲಾಂ ಧರ್ಮದ ಹೆಸರಿಡಲಾಗಿದೆ ಎಂದು ಹೇಳಿದ್ದಾಳೆ.