ನವದೆಹಲಿ: ಲೋಕಾಯುಕ್ತರಿಗೇ ನಕಲಿ ವಿಮಾನ ಪ್ರಯಾಣದ ಟಿಕೆಟ್ ನೀಡಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ದೆಹಲಿಯ ಮಾಜಿ ಲೋಕಾಯುಕ್ತರಿಗೆ ಈ ರೀತಿ ವಂಚಿಸಲಾಗಿದೆ. ವಂಚನೆಗೊಳಗಾದ ಮಾಜಿ ಲೋಕಾಯುಕ್ತರು ಪೊಲೀಸರಿಗೆ ದೂರು ನೀಡಿದ್ದಾರೆ.
ದೆಹಲಿಯ ಮಾಜಿ ಲೋಕಾಯುಕ್ತರು ದುಬೈಗೆ ತೆರಳಿದ್ದರು. ಅವರು ಅಲ್ಲಿಂದ ವಾಪಸ್ ಭಾರತಕ್ಕೆ ಮರಳಲು ಟ್ರಾವೆಲ್ ಏಜೆನ್ಸಿ ಒಂದರ ಬಳಿ ಟಿಕೆಟ್ ಬುಕ್ ಮಾಡಿದ್ದರು. ಆದರೆ ಆ ಟ್ರಾವೆಲ್ ಏಜೆನ್ಸಿಯವರು ನೀಡಿದ ಟಿಕೆಟ್ ನಕಲಿಯಾಗಿತ್ತು.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ನ್ಯಾಯಮೂರ್ತಿ (ನಿವೃತ್ತ) ಮನಮೋಹನ್ ಸರಿನ್ ಅವರು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ, ಅವರು ದೆಹಲಿ ಹೈಕೋರ್ಟ್‌ನಲ್ಲಿಯೂ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದಾರೆ. ಅವರು ಜುಲೈ 4ರಂದು ಪತ್ನಿಯೊಂದಿಗೆ ದುಬೈಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಟ್ರಾವೆಲ್ ಏಜೆನ್ಸಿಯೊಂದರ ಮೂಲಕ ಹೋಗಿ ಬರಲು ಬಿಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದರು. ಹೊರಡುವಾಗ ಟ್ರಾವೆಲ್ ಏಜೆನ್ಸಿಯವರು ಬ್ಯುಸಿನೆಸ್ ಕ್ಲಾಸ್ ಟಿಕೆಟ್ ನೀಡಿದ್ದರು. ಆದರೆ ರಿಟರ್ನ್ ಟಿಕೆಟ್ ನಕಲಿಯಾಗಿತ್ತು. ವಾಪಸಾಗುವಾಗ ಟಿಕೆಟ್ ಮುದ್ರಣಕ್ಕೆ ತಲುಪಿದಾಗ ಟಿಕೆಟ್ ಇರಲಿಲ್ಲ. ಇದಾದ ಬಳಿಕ ದೆಹಲಿ ಹೈಕೋರ್ಟಿನ ಪ್ರೋಟೋಕಾಲ್ ವಿಭಾಗವನ್ನು ಸಂಪರ್ಕಿಸಿದಾಗ ಅವರು ಟಿಕೆಟ್ ಪಡೆಯಲು ಬಯಸಿದ್ದ ಪಿಎನ್‌ಆರ್ ಸಂಖ್ಯೆ ಅಸ್ತಿತ್ವದಲ್ಲಿಲ್ಲ ಎಂಬ ಮಾಹಿತಿ ಸಿಕ್ಕಿದೆ.