ಕೋಲಾರ:ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯವನ್ನು ಸೈಬರ್ ಪೊಲೀಸರು ಮುಳಬಾಗಿಲು ತಾಲೂಕಿನ ಲಕ್ಕದೊಡ್ಡಿ ಗ್ರಾಮದಲ್ಲಿ ವಶಕ್ಕೆ ಪಡೆದರು.
120 ಬಾಕ್ಸ್ ಮದ್ಯ ವಶಪಡಿಸಿಕೊಂಡ ಕೋಲಾರ ಸೈಬರ್ ಪೊಲೀಸರು - ಕೋಲಾರ ಸುದ್ದಿ,
ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ 120 ಬಾಕ್ಸ್ ಮದ್ಯವನ್ನು ಕೋಲಾರ ಸೈಬರ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
120 ಬಾಕ್ಸ್ಗಳ ಮದ್ಯ ವಶಪಡಿಸಿಕೊಂಡ ಕೋಲಾರ ಸೈಬರ್ ಪೊಲೀಸರು
ಇಲ್ಲಿನ ತೋಟದ ಮನೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಅಂದಾಜು 5 ಲಕ್ಷ ರೂ ಮೌಲ್ಯದ ಮದ್ಯ ವಶಕ್ಕೆ ಪಡೆದು, ಓರ್ವನನ್ನು ಬಂಧಿಸಿದ್ದಾರೆ.
ಬೈರಕೂರು ಗ್ರಾಮದಲ್ಲಿರುವ ಶಿವ ವೈನ್ಸ್ನ ಮಾಲೀಕ ಕೃಷ್ಣಪ್ಪ ಎಂಬುವರಿಗೆ ಸೇರಿದ ಅಕ್ರಮ ಮದ್ಯ ಇದಾಗಿದ್ದು, ತಾಲೂಕಿನ ಲಕ್ಕದೊಡ್ಡಿ ಗ್ರಾಮದ ಕೃಷ್ಣಪ್ಪ ಎಂಬವರ ತೋಟದ ಮನೆಯಲ್ಲಿ ಸಂಗ್ರಹಿಸಿಡಲಾಗಿತ್ತು.