ಕಲಬುರಗಿ: ಸೇಡಂ ರಸ್ತೆಯ ಜಿಮ್ಸ್ ಆಸ್ಪತ್ರೆ ಎದುರು ಉದ್ರಿಕ್ತ ಯುವಕರ ಗುಂಪೊಂದು ವೀರತಾ ಉಪಾಧ್ಯ (28) ಎಂಬ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದೆ.
ಈ ಕೊಲೆಗೆ ಸುಂದರನಗರದ ಯುವಕರೇ ಕಾರಣ ಎಂದು ಆರೋಪಿಸಿ 100 ಯುವಕರ ತಂಡವು ಏಕಾಏಕಿ ಮಾರಕಾಸ್ತ್ರ ಹಿಡಿದು, ಗೂಂಡಾವರ್ತನೆ ತೋರಿದೆ. ಅಲ್ಲದೆ ಮೂರು ಕಾರು, 40ಕ್ಕೂ ಹೆಚ್ಚು ಬೈಕ್ಗಳನ್ನು ದ್ವಂಸ ಮಾಡಿ ಪರಾರಿಯಾಗಿದ್ದಾರೆ.
ಹೋಳಿ ದಿನ ರಕ್ತದೊಕುಳಿ ಹರಿಸಿದ ಪುಂಡರು ಹೋಳಿ ನಿಮಿತ್ತ ಬಣ್ಣ ಆಡಿದ್ದ ಯುವಕರು ಪಾನಮತ್ತರಾಗಿದ್ದರು. ಈ ಸಂದರ್ಭದಲ್ಲಿ ವೃದ್ಧೆಯೊಬ್ಬರ ಮನೆಯಲ್ಲಿ ದಾಂಧಲೆ ಮಾಡಿದ್ದಾರೆ. ಉದ್ರಿಕ್ತ ತಂಡದಿಂದ ತಪ್ಪಿಸಿಕೊಳ್ಳಲು ನಿವಾಸಿಗಳು ಮನೆಯ ಬಾಗಿಲು ಭದ್ರಪಡಿಸಿಕೊಂಡು ಒಳಗೆ ಅವಿತು ಕುಳಿತಿದ್ದರು.
ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.