ಕರ್ನಾಟಕ

karnataka

ETV Bharat / crime

Video: ಜಗಳ ಆಡುತ್ತಾ ವ್ಯಕ್ತಿಯ ಕೈಯನ್ನೇ ತುಂಡರಿಸಿದ ಕುಪಿತ ಮಹಿಳೆ! - ಕೇರಳದ ಇಡುಕ್ಕಿ

ಮಹಿಳೆಯೊಬ್ಬಳು ತನ್ನ ಜಮೀನಿನಲ್ಲಿ ಮಕ್ಕಳ ಡಯಾಪರ್​ ಬಿದ್ದಿದ್ದಕ್ಕೆ ಪಕ್ಕದ ಮನೆಯನೊಂದಿಗೆ ಜಗಳಕ್ಕಿಳಿದು ಆತನ ಕೈ ತುಂಡರಿಸಿದ್ದಾಳೆ.

Kerala woman chopped off man's hand
ವ್ಯಕ್ತಿಯ ಕೈಯನ್ನೇ ತುಂಡರಿಸಿದ ಮಹಿಳೆ

By

Published : Jun 18, 2021, 10:47 AM IST

ಇಡುಕ್ಕಿ (ಕೇರಳ):ತ್ಯಾಜ್ಯ ಎಸೆಯುವ ವಿಚಾರಕ್ಕೆ ನೆರೆಮನೆಯ ವ್ಯಕ್ತಿಯೊಂದಿಗೆ ಜಗಳ ಆರಂಭಿಸಿದ ಮಹಿಳೆ ಕತ್ತಿಯಿಂದ ಆತನ ಕೈ ತುಂಡರಿಸಿದ್ದಾಳೆ. ಕೇರಳದ ಇಡುಕ್ಕಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಇಡುಕ್ಕಿಯ ಅನಕ್ಕರ ಗ್ರಾಮದ ಮನು (30) ಹಲ್ಲೆಗೊಳಗಾದ ವ್ಯಕ್ತಿ. ಇದೇ ಗ್ರಾಮದ ಜೊಮೋಲ್ ಎಂಬ ಮಹಿಳೆಯು ತನ್ನ ಜಮೀನಿನಲ್ಲಿ ಮಕ್ಕಳ ಡಯಾಪರ್​ ಬಿದ್ದಿದ್ದನ್ನು ನೋಡಿ ನಿನ್ನೆ ಸಂಜೆ ಮನುವಿನೊಂದಿಗೆ ಜಗಳಕ್ಕೆ ಇಳಿದಿದ್ದಾಳೆ. ಮನುವಿನ ಮನೆ ಬಳಿಗೆ ಬರುವಾಗ ಕೈಯ್ಯಲ್ಲಿ ಕತ್ತಿಯನ್ನೂ ಹಿಡಿದು ಬಂದಿದ್ದು, ಆತನಿಗೆ ಕಾಣದಂತೆ ಹಿಂದೆ ಇಟ್ಟುಕೊಂಡು ಗಲಾಟೆ ಮಾಡಿದ್ದಾಳೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ಕೋಪಗೊಂಡ ಆಕೆ ಮನುವಿನ ಕೈ ಕತ್ತರಿಸಿದಳು.

ವ್ಯಕ್ತಿಯ ಕೈಯನ್ನೇ ತುಂಡರಿಸಿದ ಮಹಿಳೆ

ಎರಡೂ ಕುಟುಂಬಗಳ ನಡುವೆ ಅನೇಕ ವಿಚಾರಗಳಿಗೆ ಆಗಾಗ್ಗೆ ಜಗಳಗಳು ನಡೆಯುತ್ತಲೇ ಇರುತ್ತದೆ ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೈ ಕಳೆದುಕೊಂಡು ಗಾಯದ ನೋವಿನಿಂದ ಬಳಲುತ್ತಿರುವ ಮನುವನ್ನು ಸದ್ಯ ಎರ್ನಾಕುಲಂನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರೋಪಿ ಜೊಮೋಲ್​ಗಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details