ಕರ್ನಾಟಕ

karnataka

ETV Bharat / crime

ಕೊಟ್ಟ ಸೈಟ್‌ ಕೇಳಿದ್ದಕ್ಕೆ ಪಕ್ಕದ ಮನೆಯವರ ಕೊಲೆಗೆ ಯತ್ನಿಸಿ ಜೈಲು ಸೇರಿದ ಕಸಾಪ ಜಿಲ್ಲಾಧ್ಯಕ್ಷ! - ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ

ಸೈಟ್ ನಿಮ್ಮ ಬಳಿ ಇದ್ರೆ ಸಮಸ್ಯೆ ಆಗುತ್ತದೆ ಎಂದು ಪಕ್ಕ ಮನೆಯವರಿಗೆ ಭಯಪಡಿಸಿ, ನಂಬಿಸಿ ತನ್ನ ಹೆಸರಿಗೆ ಸೈಟ್ ಮಾಡಿಸಿಕೊಂಡಿದ್ದ. ನಂತರ ವಾರಸುದಾರರು ವಾಪಸ್ಸು ಕೇಳಿದ್ದಕ್ಕೆ ಮಚ್ಚು, ದೊಣ್ಣೆಗಳಿಂದ ದಾಳಿ ಮಾಡಿ ಕೊಲೆಗೆ ಯತ್ನಿಸಿರುವ ಚಿಕ್ಕಬಳ್ಳಾಪುರ ಕಸಾಪ ಜಿಲ್ಲಾಧ್ಯಕ್ಷ ಶ್ರೀನಿವಾಸ್‌ನನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

Kasapa district president murder attempt to his neighbour family in Chikkaballapura
ಕೊಟ್ಟ ಸೈಟ್‌ ಕೇಳಿದ್ದಕ್ಕೆ ಪಕ್ಕದ ಮನೆಯವರ ಕೊಲೆಗೆ ಯತ್ನಿಸಿ ಜೈಲು ಸೇರಿದ ಕಸಾಪ ಜಿಲ್ಲಾಧ್ಯಕ್ಷ!

By

Published : Oct 3, 2021, 2:15 AM IST

ಚಿಕ್ಕಬಳ್ಳಾಪುರ: ಸೈಟ್ ವಿಚಾರವಾಗಿ ಪಕ್ಕದವರ ಮೇಲೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಾರಾಣಾಂತಿಕ ಹಲ್ಲೆ ನಡೆಸಿ ಜೈಲು ಸೇರಿದ ಘಟನೆ ಚಿಂತಾಮಣಿ ತಾಲೂಕಿನ ಕೈವಾರ ಗ್ರಾಮದಲ್ಲಿ ನಡೆದಿದೆ.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಕೊಲೆಗೆ ಯತ್ನಿಸಿದ ಆರೋಪಿಯಾಗಿದ್ದು, ಗ್ರಾಮದ ನಾರಾಯಣಸ್ವಾಮಿ, ಅಶ್ವಥನಾರಾಯಣ, ಉಮಾದೇವಿ ಮೇಲೆ ಹಲ್ಲೆ ನಡಿಸಿ ಇದೀಗ ಪೊಲೀಸ್ ಕಂಬಿ ಎಣಿಸುವಂತಾಗಿದೆ.

ಪಕ್ಕದ ಮನೆಯವರ ಸೈಟ್ ಕಬಳಿಸಿದ್ದ ಎನ್.ಎಸ್ ಶ್ರೀನಿವಾಸ್, ಸೈಟ್ ನಿಮ್ಮ ಬಳಿ ಇದ್ರೆ ಸಮಸ್ಯೆ ಆಗುತ್ತದೆ ಎಂದು ಅವರಿಗೆ ಭಯಪಡಿಸಿ, ನಂಬಿಸಿ ತನ್ನ ಹೆಸರಿಗೆ ಸೈಟ್ ಮಾಡಿಸಿಕೊಂಡಿದ್ದ. ನಂತರ ವಾರಸುದಾರರು ವಾಪಸ್ಸು ಕೇಳಿದ್ದಕ್ಕೆ ಮಚ್ಚು, ದೊಣ್ಣೆಗಳಿಂದ ದಾಳಿ ಮಾಡಿ ಕೊಲೆಗೆ ಯತ್ನಿಸಿದ್ದಾನೆ.

ಸದ್ಯ ಗಾಯಾಳುಗಳಿಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಿಕೊಂಡ ಪೊಲೀಸರು ಆರೋಪಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details