ಕರ್ನಾಟಕ

karnataka

ETV Bharat / crime

ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆಮೇಲೆ ಕಲ್ಲು ಹಾಕಿ ಕಲಬುರಗಿ ಯುವಕನ ಹತ್ಯೆ - ಕಲಬುರಗಿ ಯುವಕನ ಹತ್ಯೆ ಪ್ರಕರಣ

ಮಗನನ್ನು ಯಾರೋ ಕರೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಅರಿತ ವೀರೇಶನ ಪೊಷಕರು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸಾಯಂಕಾಲ ವೀರೇಶನ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಡಬರಾಬಾದ ಸಿಂದಗಿ ಬಳಿಯ ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರದಿಂದ ಇರಿದು ಬಳಿಕ ತಲೆಯ ಮೇಲೆ ಕಲ್ಲುಹಾಕಿ ಕೊಲೆಗೈದ ದುರ್ಷರ್ಮಿಗಳು ದೇಹವನ್ನು ತಗ್ಗಿನಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ.

kalaburagi-veeresh-bhimalli-murder
ಯುವಕನ ಹತ್ಯೆ

By

Published : Feb 12, 2021, 4:08 PM IST

ಕಲಬುರಗಿ: ಮಾರಕಾಸ್ತ್ರದಿಂದ ವ್ಯಕ್ತಿಯೊಬ್ಬನನ್ನು ಕೊಚ್ಚಿ, ಬಳಿಕ ತಲೆ ಮೇಲೆ ಕಲ್ಲುಹಾಕಿ ಬರ್ಬರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಡಬರಾಬಾದ ಸಿಂದಗಿ ಬಳಿ ನಡೆದಿದೆ.

ದುಬೈ ಕಾಲೋನಿ ನಿವಾಸಿ ವೀರೇಶ ಭೀಮಳ್ಳಿ (27) ಕೊಲೆಯಾದ ಯುವಕ. ನಗರದ ಸೂಪರ್ ಮಾರ್ಕೆಟ್‌ ಬಾಂಡೆ ಬಜಾರದ ಬಾಂಡೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೀರೇಶನನ್ನು ನಿನ್ನೆ ಮಧ್ಯಾಹ್ನ ಮೂರುಜನ ಬೈಕ್ ಮೇಲೆ ಬಂದು ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.

ಮಗನನ್ನು ಯಾರೋ ಕರೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಅರಿತ ವೀರೇಶನ ಪೊಷಕರು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸಾಯಂಕಾಲ ವೀರೇಶನ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಡಬರಾಬಾದ ಸಿಂದಗಿ ಬಳಿಯ ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರದಿಂದ ಇರಿದು ಬಳಿಕ ತೆಲೆಯ ಮೇಲೆ ಕಲ್ಲುಹಾಕಿ ಕೊಲೆಗೈದ ದುಷ್ಕರ್ಮಿಗಳು ದೇಹವನ್ನು ತಗ್ಗಿನಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಂತಕರ ಬಂಧನಕ್ಕೆ ಜಾಲ ಬಿಸಿದ್ದಾರೆ. ಹಳೆಯ ವೈಷಮ್ಯದ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿಗಳ ಬಂಧನ ನಂತರ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details