ಕರ್ನಾಟಕ

karnataka

ETV Bharat / crime

ವಿಚಾರಣೆ ನಡೆಸದೇ ಠಾಣೆಯಲ್ಲಿ ವ್ಯಕ್ತಿಯನ್ನು ಬೂಟುಕಾಲಿನಿಂದ ಒದ್ದ ಆರೋಪ : ವ್ಯಕ್ತಿ ಆಸ್ಪತ್ರೆಗೆ ದಾಖಲು - ಕಡಬ ಪೊಲೀಸ್​ ಠಾಣೆ ಆರೋಪ

ಸುರೇಶ್​ನನ್ನು ವಿಚಾರಿಸಲು ಠಾಣೆಗೆ ಪುರುಷೋತ್ತಮ ಎಂಬ ವ್ಯಕ್ತಿ ಆಗಮಿಸಿದ ನಂತರ ಪೊಲೀಸರು ಮತ್ತಷ್ಟು ಹೊಡೆದಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ಮಾನಸಿಕವಾಗಿ ನೊಂದ ಸುರೇಶ್ ಈ ವಿಚಾರನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲವಂತೆ. ಇದೀಗ ಕಾಲು ನೋವು ಕಾಣಿಸಿಕೊಂಡ ಹಿನ್ನೆಲೆ ಜ.18ರಂದು ಕಡಬ ಸಮುದಾಯ ಆಸ್ಪತೆಗೆ ದಾಖಲಾಗಿದ್ದಾರೆ.

kadaba-police-assaulted-accused-without-conducting-an-inquiry
ಕಡಬ ಪೊಲೀಸ್​ ಠಾಣೆ

By

Published : Jan 19, 2021, 11:46 PM IST

ಕಡಬ : ಯಾವುದೇ ವಿಚಾರಣೆ ನಡೆಸದೆ ಠಾಣೆಗೆ ಕರೆದೊಯ್ದು ಪೊಲೀಸರು ಹೊಡೆದಿರುವುದಾಗಿ ವ್ಯಕ್ತಿಯೊಬ್ಬರು ಆರೋಪಿಸಿರುವ ಘಟನೆ ನಗರದಲ್ಲಿ ನಡೆದಿದೆ.

ವಿಚಾರಿಸದೆ ಠಾಣೆಯಲ್ಲಿ ವ್ಯಕ್ತಿಯನ್ನು ಬೂಟುಕಾಲಿನಿಂದ ಒದ್ದ ಆರೋಪ

ಘಟನೆ ಡಿ.26 ರಂದು ನಡೆದಿದ್ದು ಎನ್ನಲಾಗಿದೆ. ನೀರಾಜೆಯ ಸುರೇಶ್ ಎಂಬವರ ಮೇಲೆ ಸಂಬಂಧಿ ಮಹಿಳೆಯೊಬ್ಬರು ಕಡಬ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆ ಕಡಬ ಠಾಣಾ ಪೊಲೀಸ್‌ ಕಾನ್ಸ್‌ಟೇಬಲ್​ಗಳು ಸುರೇಶ್ ಅವರನ್ನು ಠಾಣೆಯಲ್ಲಿ ಕೂಡಿಹಾಕಿ ನೆಲದಲ್ಲಿ ಮಲಗಿಸಿ ಕಾಲಿಗೆ, ತೊಡೆಮೇಲೆ ಬೂಟ್ ಕಾಲಿನಿಂದ ಒದ್ದಿರುವುದಾಗಿ ಸುರೇಶ್ ಆರೋಪಿದ್ದಾರೆ.

ಓದಿ-ದಾಳಿಯ ನಂತರ ಎಚ್ಚೆತ್ತ ವಿಸ್ಟ್ರಾನ್:​ ಷರತ್ತುಗಳ ಮೇಲೆ ನೇಮಕಾತಿ ಪ್ರಕ್ರಿಯೆ ಆರಂಭ

ಸುರೇಶ್​ನನ್ನು ವಿಚಾರಿಸಲು ಠಾಣೆಗೆ ಪುರುಷೋತ್ತಮ್​ ಎಂಬ ವ್ಯಕ್ತಿ ಆಗಮಿಸಿದ ನಂತರ ಪೊಲೀಸರು ಮತ್ತಷ್ಟು ಹೊಡೆದಿದ್ದಾರೆ ಎನ್ನಲಾಗಿದೆ. ಪೊಲೀಸರ ಹಲ್ಲೆಯಿಂದ ಮಾನಸಿಕವಾಗಿ ನೊಂದ ಸುರೇಶ್ ಈ ವಿಚಾರನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲವಂತೆ. ಇದೀಗ ಕಾಲು ನೋವು ಕಾಣಿಸಿಕೊಂಡ ಹಿನ್ನೆಲೆ ಜ.18ರಂದು ಕಡಬ ಸಮುದಾಯ ಆಸ್ಪತೆಗೆ ದಾಖಲಾಗಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಕಡಬ ಠಾಣಾ ಎಸ್ಐ ರುಕ್ಮ ನಾಯ್ಕ್ ಆಸ್ಪತ್ರೆಗೆ ಭೇಟಿ ನೀಡಿ ಸುರೇಶ್ ಅವರನ್ನು ಘಟನೆ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಸಿಬ್ಬಂದಿ ಸುರೇಶರನ್ನು ಹೊಡೆದಿರುವುದಾಗಿ ಒಪ್ಪಿಕೊಂಡು ಕ್ಷಮೆಯಾಚಿಸಿರುವುದಾಗಿ ತಿಳಿದುಬಂದಿದೆ.

ABOUT THE AUTHOR

...view details