ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಶ್ರೀನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಕ್ರಿಯವಾಗಿರುವ 9 ಮಂದಿ ವಾಂಟೆಡ್ ಉಗ್ರರ ಪಟ್ಟಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಜಮ್ಮು-ಕಾಶ್ಮೀರ ಪೊಲೀಸರಿಂದ 9 ವಾಂಟೆಡ್ ಉಗ್ರರ ಪಟ್ಟಿ ಬಿಡುಗಡೆ - wanted terrorists
ಕಾಶ್ಮೀರ ವಲಯ ಪೊಲೀಸರು ಒಂಬತ್ತು ಉಗ್ರರ ಹೆಸರು ಮತ್ತು ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಇವರ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಕಾಶ್ಮೀರ ವಲಯ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಒಂಬತ್ತು ಉಗ್ರರ ಹೆಸರು ಮತ್ತು ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಇವರ ಬಗ್ಗೆ ಸುಳಿವು ನೀಡಿದವರಿಗೆ ಅಥವಾ ಉಗ್ರರನ್ನು ಹುಡುಕಿಕೊಟ್ಟವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ವಾಂಟೆಡ್ ಉಗ್ರರ ಲಿಸ್ಟ್ನಲ್ಲಿ ವಾಸೀಮ್ ಖಾದಿರ್, ಆದಿಲ್ ಮುಷ್ತಾಕ್, ಇರ್ಫಾನ್ ಸೋಫಿ, ಸಾಕಿಬ್ ಮಂಜೂರ್, ಬಿಲಾಲ್ ಅಹ್ಮದ್ ಭಟ್, ಉಬೈದ್ ಶಫಿ, ಮೊಹಮ್ಮದ್ ಅಬ್ಬಾಸ್ ಶೇಖ್, ಮೊಹಮ್ಮದ್ ಯೂಸುಫ್ ದಾರ್ ಮತ್ತು ಅಬ್ರಾರ್ ನದೀಮ್ ಎಂಬವರ ಹೆಸರುಗಳಿವೆ. ನಾಗರಿಕರು ಹಾಗೂ ಭದ್ರತಾ ಪಡೆ ಸಿಬ್ಬಂದಿ ಮೇಲೆ ದಾಳಿ, ಹಲ್ಲೆಗಳು ಸೇರಿ ಈ ಉಗ್ರರು ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಇವರ ಬಗ್ಗೆ ಸುಳಿವು ಸಿಕ್ಕರೆ ಮಾಹಿತಿ ಹಂಚಿಕೊಳ್ಳಲು ದೂರವಾಣಿ ಸಂಖ್ಯೆಗಳನ್ನು ಪೊಲೀಸರು ಹಂಚಿಕೊಂಡಿದ್ದಾರೆ.