ಕರ್ನಾಟಕ

karnataka

ETV Bharat / crime

ಚುನಾವಣೆ ಹೊಸ್ತಿಲಲ್ಲಿ ಡಿಎಂಕೆ ಶಾಸಕರ ಮನೆ - ಕಚೇರಿಗಳ ಮೇಲೆ ಮುಂದುವರಿದ ಐಟಿ ದಾಳಿ

ಅರವಕುರಿಚಿ ಕ್ಷೇತ್ರದ ಡಿಎಂಕೆ ಶಾಸಕ ಸೆಂಥಿಲ್​ ಬಾಲಾಜಿ ಅವರ ಬೆಂಬಲಿಗರ ಮನೆ, ಹಣಕಾಸು ಸಂಸ್ಥೆಗಳು, ಗಾರ್ಮೆಂಟ್ಸ್​ಗಳ ಮೇಲೆ ಐಟಿ ದಾಳಿ ನಡೆಸಿದೆ.

IT raid
ಐಟಿ ದಾಳಿ

By

Published : Mar 26, 2021, 1:09 PM IST

ಕರೂರ್ (ತಮಿಳುನಾಡು): ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ನಿನ್ನೆಯಿಂದ ಡಿಎಂಕೆ ಶಾಸಕರ ಮನೆ - ಕಚೇರಿಗಳ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆಯ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ.

ನಿನ್ನೆ ತಿರುವಣ್ಣಾಮಲೈ ಕ್ಷೇತ್ರದ ಡಿಎಂಕೆಯ ಹಾಲಿ ಶಾಸಕ ಹಾಗೂ ಚುನಾವಣೆ ಅಭ್ಯರ್ಥಿ ಇ.ವಿ ವೇಲು ಅವರಿಗೆ ಸಂಬಂಧಿಸಿದ ಮನೆ ಮತ್ತು ಕಚೇರಿ ಸೇರಿ ಹತ್ತು ಸ್ಥಳಗಳಲ್ಲಿ ಐಟಿ ದಾಳಿ ನಡೆದಿತ್ತು. ಇಂದು ಅರವಕುರಿಚಿ ಕ್ಷೇತ್ರದ ಡಿಎಂಕೆ ಶಾಸಕ ಸೆಂಥಿಲ್​ ಬಾಲಾಜಿ ಅವರ ಬೆಂಬಲಿಗರ ಸರದಿಯಾಗಿದೆ.

ಇದನ್ನೂ ಓದಿ:ತಿರುವಣ್ಣಾಮಲೈನಲ್ಲಿ ಸ್ಟಾಲಿನ್​ ಪ್ರಚಾರದ ದಿನವೇ ಡಿಎಂಕೆ ಶಾಸಕನ ಮನೆ ಸೇರಿ 10 ಕಡೆ ಐಟಿ ದಾಳಿ

ಕೊಯಮತ್ತೂರಿನಿಂದ ಬಂದಿರುವ 50ಕ್ಕೂ ಹೆಚ್ಚು ಐಟಿ ಅಧಿಕಾರಿಗಳು 6 ತಂಡಗಳನ್ನು ರಚಿಸಿಕೊಂಡು ಸೆಂಥಿಲ್​ ಬಾಲಾಜಿ ಬೆಂಬಲಿಗರ ಮನೆ, ಹಣಕಾಸು ಸಂಸ್ಥೆಗಳು, ಗಾರ್ಮೆಂಟ್ಸ್​ಗಳ ಮೇಲೆ ರೇಡ್​ ಮಾಡಿದ್ದಾರೆ. ದಾಖಲೆಯಿಲ್ಲದ 7 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಇಂದು ಸಂಜೆ 5 ಗಂಟೆಗೆ ಸೆಂಥಿಲ್​ ಬಾಲಾಜಿ ಪರ ಕರೂರ್​ನಲ್ಲಿ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಪ್ರಚಾರ ನಡೆಸಲಿದ್ದಾರೆ. ನಿನ್ನೆ ಕೂಡ ತಿರುವಣ್ಣಾಮಲೈನಲ್ಲಿ ಇ.ವಿ ವೇಲು ಪರ ಸ್ಟಾಲಿನ್ ಪ್ರಚಾರ ನಡೆಸುವ ಮುನ್ನ ಐಟಿ ದಾಳಿ ನಡೆದಿತ್ತು.

ABOUT THE AUTHOR

...view details