ಮುಂಬೈ:ಕಿರುತೆರೆ ನಟಿ ತುನಿಶಾ ಶರ್ಮಾ ಸಾವು ಟೆಲಿವಿಷನ್ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ಅವರ ಅಕಾಲಿಕ, ನಿಗೂಢ ಸಾವು ಅನೇಕ ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ, ಆಕೆ ಗರ್ಭವತಿ ಆಗಿದ್ದರು ಎಂಬ ಶಂಕೆ ಮೂಡಿದೆ.
ಇದರ ನಡುವೆ ನಟಿಯ ಮರಣೋತ್ತರ ಪರೀಕ್ಷೆಯಲ್ಲಿ ತುನಿಶಾ ಆಕೆ ಗರ್ಭಿಣಿ ಆಗಿರಲಿಲ್ಲ. ಅವರು ನೇಣಿಗೆ ಶರಣಾಗಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ವರದಿ ತಿಳಿಸಿದೆ. 20 ವರ್ಷದ ನಟಿ ತಮ್ಮ ಸಹ ಕಲಾವಿದ ಜೊತೆಗೆ ಬಾಯ್ಫ್ರೆಂಡ್ ಶೀಝಾನ್ ಮಹಮ್ಮದ್ ಖಾನ್ ಅವರ ಮೇಕಪ್ ರೂಂನಲ್ಲಿ ಡಿಸೆಂಬರ್ 24ರಂದು ಆತ್ಮಹತ್ಯೆ ಮಾಡುಇ ಶರಣಾಗಿದ್ದರು.
ಆಲಿ ಬಾಬಾ ಶೋನಲ್ಲಿ ಕಾಣಿಸಿಕೊಂಡ ಜೋಡಿ: ದಾಸ್ತಾನ್ ಇ- ಕಬೂಲ್ ಶೀಜನ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ. ತುನಿಶಾ ತಾಯಿ ದೂರು ದಾಖಲಿಸಿದ್ದು, ನಟನನಿಂದ ಮಗಳು ಮಾನಸಿಕವಾಗಿ ಒತ್ತಡಕ್ಕೆ ಗುರಿಯಾಗಿದ್ದಳು ಎಂದು ತಿಳಿಸಿದ್ದಾರೆ.