ಕರ್ನಾಟಕ

karnataka

ETV Bharat / crime

ವಿಜಯಪುರ : ಐಪಿಎಲ್ ಬೆಟ್ಟಿಂಗ್ ನಡೆಸಿದ 8 ಜನರ ಬಂಧನ - ಬೆಟ್ಟಿಂಗ್ ನಡೆಸಿದ 8 ಜನರ ಬಂಧನ

ಮತ್ತೋರ್ವ ಆರೋಪಿ ಯೋಗಿರಾಜ ಉರ್ಫ್ ಯೋಗೀಶ್ ಮನೋಹರ ಶೇರಖಾನೆ ಪರಾರಿಯಾಗಿದ್ದಾನೆ. ವಿಜಯಪುರ ಜಿಲ್ಲೆಯ ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

IPL betting
IPL betting

By

Published : Apr 18, 2021, 7:25 PM IST

ವಿಜಯಪುರ: ವಿಜಯಪುರ ಸಿಇಎನ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಐಪಿಎಲ್ ಕ್ರಿಕೆಟ್ ಬೆಟ್ಗಿಂಗ್ ನಡೆಸುತ್ತಿದ್ದ ಸ್ಥಳದಲ್ಲಿ ಮೇಲೆ ದಾಳಿ ನಡೆಸಿದ್ದಾರೆ.

ಈ ಸಂಬಂಧ 8 ಜನರನ್ನು ಬಂಧಿಸಿ 16 ಮೊಬೈಲ್, 92,810 ನಗದು ವಶಪಡಿಸಿಕೊಂಡಿದ್ದಾರೆ. ವಿಜಯಪುರ ಸಿಇಎನ್ ಸಿಪಿಐ ಸುರೇಶ್ ಬೆಂಡೆಗುಂಬಳ ಮತ್ತು 17 ಜನರ ತಂಡದಿಂದ ದಾಳಿಯಲ್ಲಿ ಭಾಗಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಡಿಸಿಸಿ ಬ್ಯಾಂಕ್ ಎದುರು ಇರುವ ಕಾಂಪ್ಲೆಕ್ಸ್ ಮಹಡಿಯ ಬಳಿ ದಾಳಿ ನಡೆಸಿ, ಇಂಡಿ ಪಟ್ಟಣದ ಶಿವು ಮತ್ತು ಶಿವಪುತ್ರ ಚಂದ್ರಾಮ ಬಗಲಿ, ಧರ್ಮು ಉರ್ಫ್ ಧರ್ಮೇಂದ್ರ ಹುಚ್ಚಪ್ಪ ಹರಿಜನ, ಅಶ್ವತ್ಥ್ ಅಶೋಕ ಬನಸೋಡೆ, ಮಹ್ಮದ ಶಫೀಕ್ ಶಕೀಲ ಶೇಖ್, ಮಹೇಶ ಭೀಮಪ್ಪ ಆನಂದ, ರಾಹುಲ್ ಮನೋಹರ ಶೇರಖಾನೆ ಚಡಚಣದ ಸಾಗರ ಸಿದ್ಧರಾಮ ಸಿಂಧೆ ಉರ್ಫ್ ಬಾಟ ಎಂಬುವರನ್ನು ಬಂಧಿಸಿದ್ದಾರೆ.

ನಿನ್ನೆ ರಾತ್ರಿ ನಡೆದ ಮುಂಬಯಿ ಇಂಡಿಯನ್ಸ್ ಮತ್ತು ಹೈದರಾಬಾದ ಸನ್ ರೈಸರ್ಸ್ ತಂಡಗಳ ನಡುವಿನ ಐಪಿಎಲ್ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿ. ಮುಂಬಯಿ ಇಂಡಿಯನ್ಸ್ ಗೆದ್ದರೆ ₹3000ಗೆ ₹5000, ಸನ್ ರೈಸರ್ಸ್ ಹೈದರಾಬಾದ್ ಗೆದ್ದರೆ ರೂ.4000ಗೆ ₹7000 ಹಣ ನೀಡುವ ಒಪ್ಪಂದದಂತೆ ಮೊಬೈಲ್‌ನಲ್ಲಿ ಬೆಟ್ಟಿಂಗ್ ವ್ಯವಹಾರ ಕುದುರಿಸುತ್ತಿದ್ದರು.

ಮತ್ತೋರ್ವ ಆರೋಪಿ ಯೋಗಿರಾಜ ಉರ್ಫ್ ಯೋಗೀಶ್ ಮನೋಹರ ಶೇರಖಾನೆ ಪರಾರಿಯಾಗಿದ್ದಾನೆ. ವಿಜಯಪುರ ಜಿಲ್ಲೆಯ ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details