ಮುಂಬೈ(ಮಹಾರಾಷ್ಟ್ರ):ನಟಿಯೊಬ್ಬರಿಗೆಅತ್ಯಾಚಾರ ಯತ್ನ ಮತ್ತು ಜೀವ ಬೆದರಿಕೆ ಹಾಕಿದ ಗಂಭೀರ ಆರೋಪದಲ್ಲಿ ಇಂಟಿರಿಯರ್ ಡಿಸೈನರ್‌ವೋರ್ವನ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಂಟೀರಿಯರ್ ಡಿಸೈನರ್‌ನಿಂದ ಅತ್ಯಾಚಾರ ಯತ್ನ, ಜೀವ ಬೆದರಿಕೆ: ಪೊಲೀಸರಿಗೆ ದೂರು ನೀಡಿದ ನಟಿ - ಮುಂಬೈ
ಅಪಾರ್ಟ್‌ಮೆಂಟ್‌ನಲ್ಲಿ ಒಳಾಂಗಣ ವಿನ್ಯಾಸ ಮಾಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯ ವೇಳೆ ಇಂಟೀರಿಯರ್ ಡಿಸೈನರ್‌ವೋರ್ವ ಅತ್ಯಾಚಾರಕ್ಕೆ ಯತ್ನ ನಡೆಸಿದ್ದಾನೆ ಎಂದು ದೂರಿ ನಟಿಯೊಬ್ಬರು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.
ಮುಂಬೈನಲ್ಲಿ ನಟಿಗೆ ಇಂಟಿರಿಯರ್ ಡಿಸೈನರ್‌ನಿಂದ ಬೆದರಿಕೆ ಆರೋಪ; ಕೇಸ್ ದಾಖಸಿದ ಪೊಲೀಸರಿಂದ ತನಿಖೆ
ಅಂಧೇರಿಯಲ್ಲಿರುವ ತನ್ನ ಹೊಸ ಅಪಾರ್ಟ್ಮೆಂಟ್‌ನಲ್ಲಿ ಡಿಸೈನರ್‌ಗೆ ನಟಿ ಕೆಲಸ ನೀಡಿದ್ದರು. ಆದರೆ ಆಕೆಯ ನಿರೀಕ್ಷೆಗೆ ತಕ್ಕಂತೆ ವಿನ್ಯಾಸದ ಕೆಲಸ ಮಾಡಿಕೊಟ್ಟಿಲ್ಲ ಎಂದು ನಟಿ ಅಸಮಾಧಾನ ವ್ಯಕ್ತಪಡಿಸಿದ್ದರಂತೆ. ಇದು ಇಬ್ಬರ ನಡುವಿನ ವಾಗ್ವಾದಕ್ಕೆ ಕಾರಣವಾಗಿತ್ತು.
ಈ ವೇಳೆ ಇಂಟೀರಿಯರ್ ಡಿಸೈನರ್ ಅಸಭ್ಯವಾಗಿ ವರ್ತಿಸಿ, ನಿಂದಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ನಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.