ಗಯಾ (ಬಿಹಾರ): ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರು ನೆಲಕ್ಕೆ ಎಂಜಲು ಉಗುಳಿ, ಅದನ್ನು ದಲಿತ ಯುವಕನ ನಾಲಗೆಯಿಂದ ನೆಕ್ಕಿಸಿರುವ ಘಟನೆ ಬಿಹಾರದ ಗಯಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ದಲಿತ ಯುವಕನಿಗೆ ಉಗುಳಿದ ಎಂಜಲನ್ನು ನೆಕ್ಕಿಸಿದ ಗ್ರಾ.ಪಂ ಮಾಜಿ ಅಧ್ಯಕ್ಷ ಬಿಹಾರದಲ್ಲಿ ಪಂಚಾಯತ್ ಚುನಾವಣೆ ಬರಲಿದ್ದು, ತಮ್ಮ ಪರವಾಗಿ ಪ್ರಚಾರಕ್ಕೆ ಬರಲು ನಿರಾಕರಿಸದ್ದಕ್ಕೆ ತಮ್ಮ ಮನೆಗೆ ಕರೆಯಿಸಿಕೊಂಡು ಮಾಜಿ ಅಧ್ಯಕ್ಷ ಹಾಗೂ ಅವರ ಬೆಂಬಲಿಗರು ಥಳಿಸಿ ಹೀಗೆ ಮಾಡಿಸಿದ್ದಾರೆ ಎಂದು ನೊಂದ ಯುವಕ ಆರೋಪಿಸಿದ್ದಾನೆ.
ಇದನ್ನೂ ಓದಿ: ಸಿಡಿ ಪ್ರಕರಣ: ಮತ್ತೊಂದು ವಿಡಿಯೋ ಹರಿಬಿಟ್ಟ ಲೇಡಿ, ಹನಿಟ್ರ್ಯಾಪ್ ಕುರಿತು ಹೇಳಿದ್ದೇನು?
ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ಇದೊಂದು ಪ್ರೇಮ ಪ್ರಕರಣವಾಗಿದ್ದು, ಯುವಕನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವ ಬದಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರ ಮನೆಗೆ ಕರೆದೊಯ್ದು ಈ ರೀತಿ ನಡೆಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, 6 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.