ಕಚ್( ಗುಜರಾತ್):ಮುಂದ್ರಾ ಪೋರ್ಟ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 77 ಕೋಟಿ ಮೌಲ್ಯದ ಬ್ರ್ಯಾಂಡೆಡ್ ಕಾಸ್ಮೆಟಿಕ್ಸ್ ಜಪ್ತಿ ಮಾಡಲಾಗಿದೆ. ಮುಂದ್ರಾ ಪೋರ್ಟ್ನ ಅದಾನಿ ಪೋರ್ಟ್ ಎಸ್ಇಝೆಡ್ ಆಮದಾದ ಕಾರ್ಗೊವನ್ನು ತಡೆದು ಪರಿಶೀಲನೆ ಮಾಡಿತ್ತು. ಕಾರ್ಗೊದಲ್ಲಿರುವ ಸರಕಿನ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ ಎಂಬ ಸಂಶಯದಲ್ಲಿ ಈ ತಪಾಸಣೆ ನಡೆದಿತ್ತು. ಆದರೆ ಕಂಟೇನರ್ನಲ್ಲಿ 773 ವೆಂಟಿ ಕೇಸ್ ಪ್ಯಾಕೆಟ್ಗಳು ಪತ್ತೆಯಾಗಿದ್ದವು. ಇದರ ಹಿಂದೆ ನಿರ್ಬಂಧಿತ ಕಾಸ್ಮೆಟಿಕ್ ಸರಕುಗಳಿದ್ದವು.
ಕಂಟೇನರ್ನಲ್ಲಿ ಪಟ್ಟಿ ಮಾಡಲಾದ ವಸ್ತುಗಳ ಹಿಂದೆ ಮೇಕ್ ಅಪ್ ಬೇಸ್ ಸೇರಿದಂತೆ ಹಲವಾರು ಸೌಂದರ್ಯ ವರ್ಧಕಗಳಿದ್ದವು. ಎಂಎಸಿ, ನಾರ್ಸ್, ಲಾರಿಯಲ್, ಲೌರಾ ಮರ್ಸಿಯರ್, ಮೆಬೆಲ್ಲೈನ್ ಮತ್ತು ಮ್ಯಾಟರ್ಇಕ್ಸ್ನಿಂದ ಬಿಡುಗಡೆಯಾದ ಉತ್ಪನ್ನಗಳಾದ ಲಿಪ್ ಗ್ಲಾಸ್‌ಗಳು, ಕೂದಲು ಕಂಡಿಷನರ್‌ಗಳು, ಲಿಕ್ವಿಡ್ ಐಲೈನರ್, ಬ್ಯೂಟಿ ಆಯಿಲ್‌ಗಳು ಮತ್ತು ಕ್ರೀಮ್‌ಗಳು ಸಿಕ್ಕಿವೆ. ಇವನ್ನು ಕಸ್ಟಮ್ಸ್ ಕಾಯಿದೆಯ ನಿಯಮಗಳಿಗೆ ವಿರುದ್ಧವಾಗಿ ಇವುಗಳನ್ನು ಭಾರತದೊಳಕ್ಕೆ ತರಲಾಗಿತ್ತು.