ಕರ್ನಾಟಕ

karnataka

ETV Bharat / crime

ಗಾಂಜಾ ಸಾಗಾಟ: ಓರ್ವ ಆರೋಪಿಯ ಬಂಧನ - ಓರ್ವ ಆರೋಪಿ ಬಂಧನ

ಗಾಂಜಾ ಸಾಗಾಟಕ್ಕೆ ಬಳಕೆ ಮಾಡಲಾಗಿದ್ದ ದ್ವಿಚಕ್ರ ವಾಹನವನ್ನ ಜಪ್ತಿ ಮಾಡಲಾಗಿದ್ದು, ಬೈಕುಂತ ದಂಡ ಸೇನಾ ಎಂಬಾತನನ್ನ ಬಂಧಿಸಲಾಗಿದೆ.

Ganja raid
Ganja raid

By

Published : Apr 24, 2021, 4:10 PM IST

ಕೋಲಾರ: ತಾಲೂಕಿನ ಕುರುಗಲ್ ಗೇಟ್ ಬಳಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಓರ್ವನನ್ನ ಬಂಧಿಸಿದ್ದಾರೆ.

ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, ಓರ್ವನನ್ನ ಬಂಧಿಸಿದ್ದು, ಬಂಧಿತನಿಂದ ಸುಮಾರು 80 ಸಾವಿರ ರೂ. ಮೌಲ್ಯದ ಒಂದೂವರೆ ಕೆಜಿ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ.

ಅಲ್ಲದೆ ಗಾಂಜಾ ಸಾಗಾಟಕ್ಕೆ ಬಳಕೆ ಮಾಡಲಾಗಿದ್ದ ದ್ವಿಚಕ್ರ ವಾಹನವನ್ನ ಜಪ್ತಿ ಮಾಡಲಾಗಿದ್ದು, ಬೈಕುಂತ ದಂಡ ಸೇನಾ ಎಂಬಾತನನ್ನ ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಕೊಲಾರ ವಲಯದ ಅಬಕಾರಿ ನಿರೀಕ್ಷಕರಾದ ಅರುಣಾ, ಉಪನಿರೀಕ್ಷಕರಾದ ರವೀಂದ್ರ ಆರ್., ಸುವರ್ಣ ಬಿ. ಕೋಟಿ, ಅಬಕಾರಿ ಕಾನ್ಸ್​ಟೇಬಲ್​​ ಮಂಜುನಾಥ್ ಎಂ., ಕೆ.ಎಸ್.ಅನಿಲ್ ಕುಮಾರ್, ಸಾಬು ಕಾತ್ರಾಳ ಮುಂತಾದವರು ಭಾಗಿಯಾಗಿದ್ದರು.

ABOUT THE AUTHOR

...view details