ಕರ್ನಾಟಕ

karnataka

By

Published : Jan 24, 2021, 7:15 AM IST

ETV Bharat / crime

ಪೌಲ್​ ದಿನಕರನ್ ನಿವಾಸದ ಮೇಲೆ ಐಟಿ ದಾಳಿ: 4.7 ಕೆಜಿ ಚಿನ್ನದ ಬಾರ್​ಗಳು ವಶಕ್ಕೆ

ತೆರಿಗೆ ವಂಚನೆ ಆರೋಪದ ಮೇಲೆ ಸುವಾರ್ತಾಬೋಧಕ ಪೌಲ್​ ದಿನಕರನ್ ಅವರ ನಿವಾಸ, 'ಜೀಸಸ್ ಕಾಲ್ಸ್' ಮಿಷನರಿ, ಕಾರುಣ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದಂತೆ ಅವರಿಗೆ ಸೇರಿದ 28 ಸ್ಥಳಗಳ ಮೇಲೆ ಐಟಿ ದಾಳಿ ನಡೆಸಿದೆ.

Paul Dhinakaran
ಪೌಲ್​ ದಿನಕರನ್

ಚೆನ್ನೈ:ತಮಿಳುನಾಡಿನ ಕೋಯಮತ್ತೂರಿನಲ್ಲಿರುವ ಸುವಾರ್ತಾಬೋಧಕನ ಮನೆ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು 4.7 ಕೆಜಿ ಚಿನ್ನದ ಬಾರ್​ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ತೆರಿಗೆ ವಂಚನೆ ಆರೋಪದ ಮೇಲೆ ಸುವಾರ್ತಾಬೋಧಕ ಪೌಲ್​ ದಿನಕರನ್ ಅವರ ನಿವಾಸ, ಚೆನ್ನೈನಲ್ಲಿರುವ 'ಜೀಸಸ್ ಕಾಲ್ಸ್' ಮಿಷನರಿ, ಕಾರುಣ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದಂತೆ ಅವರಿಗೆ ಸೇರಿದ 28 ಸ್ಥಳಗಳ ಮೇಲೆ ಜನವರಿ 20 ರಂದು ಐಟಿ ದಾಳಿ ನಡೆಸಿತ್ತು. ದಾಳಿ ವೇಳೆ 4.7 ಕೆಜಿ ಚಿನ್ನದ ಬಾರ್​ಗಳು ಹಾಗೂ ದೇಣಿಗೆ, ವಿದೇಶಿ ಹೂಡಿಕೆ ಸಂಬಂಧ ಕೆಲ ದಾಖಲೆಗಳು ಸಿಕ್ಕಿವೆ ಎನ್ನಲಾಗ್ತಿದ್ದು, 118 ಕೋಟಿ ರೂ.ಗಳ ವ್ಯವಹಾರದ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: ಏಕ್​ ದಿನ್​ ಕಾ ಸಿಎಂ... ಇಂದು ಉತ್ತರಾಖಂಡದ ಮುಖ್ಯಮಂತ್ರಿ ಆಗಲಿದ್ದಾಳೆ ಸೃಷ್ಟಿ ಗೋಸ್ವಾಮಿ!

ಪೌಲ್​ ದಿನಕರನ್, ಜೀಸಸ್ ಕಾಲ್ಸ್ ಮಿಷನರಿಯ ಸಂಸ್ಥಾಪಕ ಜಿಎಸ್ ದಿನಕರನ್ ಅವರ ಪುತ್ರರಾಗಿದ್ದು, ಕಾರುಣ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕುಲಪತಿಯಾಗಿದ್ದಾರೆ.

ABOUT THE AUTHOR

...view details