ಕರ್ನಾಟಕ

karnataka

ETV Bharat / crime

24 ಗಂಟೆಗಳಲ್ಲಿ ಕಿಡ್ನಾಪ್​ ಆಗಿದ್ದ ಮಗು ರಕ್ಷಿಸಿದ ಹೈದರಾಬಾದ್‌ ಪೊಲೀಸರು.. ಕಾರಣ ಸಿಸಿ ಟಿವಿ - ತೆಲಂಗಾಣ ಕ್ರೈಂ ಸುದ್ದಿ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂಡವೊಂದನ್ನು ರಚಿಸಿ, ಕೇವಲ 24 ಗಂಟೆಗಳಲ್ಲಿ ಮಗುವನ್ನು ಪತ್ತೆಹಚ್ಚಿ, ರಕ್ಷಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯು ಬಾಲಕಿಯನ್ನು ಅಪಹರಿಸುತ್ತಿರುವ ದೃಶ್ಯ ಸೆರೆಯಾಗಿತ್ತು..

Hyderabad police solve child kidnap case within 24hrs
24 ಗಂಟೆಗಳಲ್ಲಿ ಕಿಡ್ನ್ಯಾಪ್​ ಆಗಿದ್ದ ಮಗುವನ್ನ ರಕ್ಷಿಸಿದ ಹೈದರಾಬಾದ್‌ ಪೊಲೀಸ್​

By

Published : Jan 30, 2021, 2:37 PM IST

ಹೈದರಾಬಾದ್ ‌:ತಮ್ಮ ಮಗಳು ಕಾಣೆಯಾಗಿದ್ದಾಳೆಂದು ಬಡ ಗುಜರಿ ವ್ಯಾಪಾರಿಯೊಬ್ಬ ದೂರು ನೀಡಿದ 24 ಗಂಟೆಯೊಳಗೆ ತೆಲಂಗಾಣದ ಹೈದರಾಬಾದ್‌ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

ಜನವರಿ 27ರಂದು ಹೈದರಾಬಾದ್​ನ ಮೂಸರಂಬಾಗ್​ನಲ್ಲಿ ಫುಟ್‌ಪಾತ್‌ನಲ್ಲಿ ಅಜಯ್​​, ಅವರ ಪತ್ನಿ ಹಾಗೂ ಎರಡೂವರೆ ವರ್ಷದ ಮಗಳೊಂದಿಗೆ ಮಲಗಿದ್ದರು. ಆದರೆ, ತಡರಾತ್ರಿ 1.30ರ ವೇಳೆಗೆ ಎಚ್ಚರಗೊಂಡು ನೋಡಿದಾಗ ತನ್ನ ಮಗಳು ಇರಲಿಲ್ಲ. ಮರು ದಿನವೇ ಮಲಕ್‌ಪೇಟ್​ ಪೊಲೀಸ್ ಠಾಣೆಗೆ ಬಂದು ಅಪಹರಣದ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಕ್ಷುಲ್ಲಕ ಕಾರಣಕ್ಕೆ ದೇವರ ಉತ್ಸವದಲ್ಲಿ ಇಬ್ಬರು ಯುವಕರ ನಡುವೆ ಮಾರಾಮಾರಿ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂಡವೊಂದನ್ನು ರಚಿಸಿ, ಕೇವಲ 24 ಗಂಟೆಗಳಲ್ಲಿ ಮಗುವನ್ನು ಪತ್ತೆಹಚ್ಚಿ, ರಕ್ಷಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದ ಓರ್ವ ವ್ಯಕ್ತಿಯು ಬಾಲಕಿಯನ್ನು ಅಪಹರಿಸುತ್ತಿರುವ ದೃಶ್ಯ ಸೆರೆಯಾಗಿತ್ತು.

ಇದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ. ಈತ ಮಗುವನ್ನು ಕಿಡ್ನ್ಯಾಪ್​ ಮಾಡಿ ಮಾರಾಟ ಮಾಡಲು ಮುಂದಾಗಿದ್ದ ಎಂದು ಹೈದರಾಬಾದ್​ ಪೊಲೀಸ್​ ಆಯುಕ್ತರು ತಿಳಿಸಿದ್ದಾರೆ.

ABOUT THE AUTHOR

...view details