ಕರ್ನಾಟಕ

karnataka

ETV Bharat / crime

ವರದಕ್ಷಿಣೆ ಕೊಟ್ಟಿಲ್ಲ ಅಂತ ಪತ್ನಿಯನ್ನೇ ವೇಶ್ಯೆಯಂತೆ ಬಿಂಬಿಸಿದ ಭೂಪ..! - facebook

ಮದುವೆಯಾಗಿ ಮೂರು ವರ್ಷಗಳ ವರದಕ್ಷಿಣೆಗಾಗಿ ಹೆಂಡತಿಗೆ ಕಿರುಕುಳ ನೀಡಲು ಶುರು ಮಾಡಿದ ಪತಿರಾಯ, ಫೇಸ್​ಬುಕ್​ನಲ್ಲಿ ಆಕೆಯ ಮರ್ಯಾದೆಯನ್ನು ಹರಾಜಿಗೆ ಹಾಕಿದ್ದಾನೆ.

By

Published : Jun 12, 2021, 5:35 PM IST

ಮೀರತ್ (ಉತ್ತರ ಪ್ರದೇಶ): ವರದಕ್ಷಿಣೆ ಕೊಟ್ಟಿಲ್ಲ ಅಂತ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನ 'ಕಾಲ್ ಗರ್ಲ್' (ವೇಶ್ಯೆ) ಎಂದು ಫೇಸ್​ಬುಕ್​ನಲ್ಲಿ ವೈರಲ್ ಮಾಡಿದ್ದಲ್ಲದೇ, ಆಕೆಯ ಮೊಬೈಲ್ ಸಂಖ್ಯೆಯನ್ನೂ ಪೋಸ್ಟ್ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ. ಮಹಿಳೆಗೆ ಕರೆಗಳು ಬರಲು ಆರಂಭಿಸಿದಾಗಿ ವಿಷಯ ಬೆಳಕಿಗೆ ಬಂದಿದೆ.

ಮದುವೆಯಾಗಿ ಮೂರು ವರ್ಷಗಳ ಬಳಿಕ ಪತಿಯು ತವರು ಮನೆಯಿಂದ ಬೈಕ್​ ಕೊಡಿಸುವಂತೆ, ಹಣ ನೀಡುವಂತೆ ಹೆಂಡತಿಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಇದೇ ವಿಚಾರಕ್ಕೆ ದಂಪತಿ ನಡುವೆ ಗಲಾಟೆಗಳು ನಡೆಯುತ್ತಿದ್ದವು. ಬಳಿಕ ವರದಕ್ಷಿಣೆ ನೀಡಲು ನಿರಾಕರಿಸಿದ ಆಕೆ ಮೇಲೆ ಕಕುಡಿದು ಬಂದು ಹಲ್ಲೆ ಮಾಡಲು ಆರಂಭಿಸಿದ್ದಾನೆ. ಯಾವುದಕ್ಕೂ ಬಗ್ಗದ್ದನ್ನು ನೋಡಿ ಆಕೆಗೆ ಪಾಠ ಕಲಿಸಲು, ಪತ್ನಿ ಹೆಸರಲ್ಲಿ ಫೇಸ್​ಬುಕ್​ ನಕಲಿ ಖಾತೆಯನ್ನು ತೆರೆದು, ಮೊಬೈಲ್ ನಂಬರ್​ ಹಂಚಿಕೊಂಡಿದ್ದಾನೆ.

ಇದನ್ನೂ ಓದಿ:ಸೇಡು.. ಬಾಲಕಿಯನ್ನ ಅಪಹರಿಸಿ 15 ದಿನಗಳ ಕಾಲ ಅತ್ಯಾಚಾರ ಮಾಡಿದ ಪಾಪಿಗಳು!

ನಿರಂತರ ದೂರವಾಣಿ ಕರೆಗಳಿಂದ ತೊಂದರೆಗೀಡಾದ ಮಹಿಳೆ ತವರು ಮನೆಗೆ ಬಂದು ನೆಲೆಸಿ, ಮೀರತ್​ನ ಮುಂಡಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details