ಪಾಟ್ನಾ (ಬಿಹಾರ): ಹೆಂಡತಿಗೆ ಕೊರೊನಾ ಸೋಂಕು ತಗುಲಿದೆಯೆಂದು ಆಕೆಯನ್ನು ಕೊಲೆ ಮಾಡಿದ ಪತಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ಐದಾರು ದಿನಗಳ ಹಿಂದೆ ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುವ ಅತುಲ್ ಲಾಲ್ ಎಂಬಾತನ ಪತ್ನಿಯ ಕೋವಿಡ್ ವರದಿ ಪಾಸಿಟಿವ್ ಬಂದಿತ್ತು. ಆಕೆ ಸೋಂಕಿಗೆ ಒಳಗಾದಾಗಿನಿಂದಲೂ ದಂಪತಿ ನಡುವೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ರೌಡಿಶೀಟರ್ನ ಬರ್ಬರ ಹತ್ಯೆ: ವಿಡಿಯೋ ವೈರಲ್
ಇಂದು ಬೆಳಗ್ಗೆ ಬ್ಲೇಡ್‌ನಿಂದ ಹೆಂಡತಿಯ ಕುತ್ತಿಗೆ ಕೊಯ್ದು ಸಾಯಿಸಿದ್ದ ಅತುಲ್, ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಿಂದ ಹಾರಿ ತನ್ನ ಜೀವವನ್ನೂ ಕಳೆದುಕೊಂಡಿದ್ದಾನೆ. ಇವರ ಮಕ್ಕಳ ಕಣ್ಮುಂದೆಯೇ ಈ ಘಟನೆ ನಡೆದಿದೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.