ಜೈಪುರ (ರಾಜಸ್ಥಾನ): ತನ್ನ ಹೆಂಡತಿ ಹಾಗೂ 13 ತಿಂಗಳ ಗಂಡು ಮಗುವನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಪತಿಯೊಬ್ಬ, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಗಿರಿರಾಜ್ ಮೀನಾ ಹಾಗೂ ಸಮಿತಾ ಮೀನಾ ದಂಪತಿ ಜೈಪುರದ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರಾಗಿದ್ದು, ತಮ್ಮ ಮಗುವಿನೊಂದಿಗೆ ಲಜಪತ್ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರೊಂದಿಗೆ ಸಮಿತಾರ ಸಹೋದರಿ ದಿವ್ಯಾ ಕೂಡ ವಾಸವಾಗಿದ್ದರು. ಸಂಬಂಧಿಕರೊಬ್ಬರ ಮದುವೆಗೆ ಕರೆದೊಯ್ಯಲೆಂದು ಸಮಿತಾರ ತಂದೆ ಮನೆಗೆ ಬಂದಿದ್ದು, ಪತ್ನಿಯನ್ನು ಕಳುಹಿಸಲು ಗಿರಿರಾಜ್ ನಿರಾಕರಿಸಿದ್ದಾರೆ. ಹೀಗಾಗಿ ಮಗಳು ದಿವ್ಯಾಳನ್ನು ಕರೆದುಕೊಂಡು ತಂದೆ ಹೊರಟು ಹೋಗಿದ್ದಾರೆ. ಇದೇ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳವಾಗಿದ್ದು, ಗಿರಿರಾಜ್ ಕೃತ್ಯ ಎಸಗಿದ್ದಾನೆ.