ನಾಗ್ಪುರ, ಮಹಾರಾಷ್ಟ್ರ:ಅಪ್ರಾಪ್ತೆ ಮೇಲೆ ಒಂದೇ ರಾತ್ರಿಯಲ್ಲಿ ಎರಡು ಬಾರಿ ಸಾಮೂಹಿಕ ಅತ್ಯಾಚಾರ ನಡೆದಿರುವ ಕೀಚಕ ಕೃತ್ಯ ಜುಲೈ 29ರಂದು ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಸೂಮ್ ಶಾ ಟಕಿಯಾದ ನಿವಾಸಿ ಶಹನವಾಜ್ ಅಲಿಯಾಸ್ ಸನಾ ರಶೀದ್ (25), ಬಕ್ರಾ ಮಂಡಿ ನಿವಾಸಿಗಳಾದ ಯೂಸೂಫ್ (26), ಮುಶೀರ್(23) ಎಂದ ಆರೋಪಿಗಳ ಗುರುತು ಪತ್ತೆ ಹಚ್ಚಲಾಗಿದೆ.
ಕಾಮುಕರ ಅಟ್ಟಹಾಸ
ವರದಿಗಳ ಪ್ರಕಾರ ಅತ್ತಿಗೆ ಜೊತೆಗೆ ಯಾವುದೋ ವಿಚಾರಕ್ಕೆ ಜಗಳವಾಡಿಕೊಂಡಿದ್ದ 17 ವರ್ಷದ ಬಾಲಕಿ ಜುಲೈ 29ರಂದು ಮನೆಯಿಂದ ಹೊರಗೆ ಬಂದಿದ್ದು, ಸಿತಾಬುಲ್ಡಿ ಚೌಕಕ್ಕೆ ತೆರಳಿದ್ದಳು. ಇಲ್ಲಿ ಆಟೋ ಚಾಲಕ ಶಹನವಾಜ್ ಆಕೆಯನ್ನು ನೋಡಿ, ಆಕೆ ಗೊಂದಲದಲ್ಲಿ ಇರುವುದನ್ನು ಕಂಡು ಏನಾದರೂ ಸಹಾಯ ಬೇಕಿತ್ತೇ ಎಂದು ಕೇಳಿದ್ದನು.
ಬಾಲಕಿ ಶಹನವಾಜ್ ಆಟೋದಲ್ಲಿ ಕುಳಿತುಕೊಂಡು ಮೊಮಿನ್ಪುರಕ್ಕೆ ಹೊರಡುವ ವೇಳೆ, ಮಾರ್ಗಮಧ್ಯೆ ಆಕೆಗೆ ಮದ್ಯಪಾನ ಮಾಡಿಸಿದ ಶಹನವಾಜ್, ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿದ್ದನು. ಆನಂತರ ಆತನ ಮೂವರು ಸ್ನೇಹಿತರಿಗೆ ಕರೆ ಮಾಡಿ, ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದನು.
ಈ ಘಟನೆಯ ನಂತರ ಆಕೆಯನ್ನು ಮೆಯೋ ಆಸ್ಪತ್ರೆ ಚೌಕದ ಬಳಿ ಕಾಮುಕರು ಬಿಟ್ಟು ಹೋಗಿದ್ದರು. ಈ ವೇಳೆ, ಆಕೆಯನ್ನು ಗಮನಿಸಿದ ಮತ್ತಿಬ್ಬರು ಆಟೋ ಡ್ರೈವರ್ಗಳು ಮತ್ತೆ ಆಕೆಯ ಮೇಲೆ ಅತ್ಯಾಚಾರ ಎಸಗಿ ಅಲ್ಲೆ ಬಿಟ್ಟು ತೆರಳಿದ್ದರು.
ಕೆಲವು ಸಮಯದ ನಂತರ ಇಬ್ಬರು ಬೈಕರ್ಗಳ ಸಹಾಯದೊಂದಿಗೆ ಆಕೆ ರೈಲ್ವೆ ನಿಲ್ದಾಣ ತಲುಪಿದ್ದಳು. ಇಲ್ಲಿ ಜಿಆರ್ಪಿ ( ಗವರ್ನಮೆಂಟ್ ರೈಲ್ವೆ ಪೊಲೀಸ್)ನ ಸಿಬ್ಬಂದಿ ಸಂತ್ರಸ್ತೆಯನ್ನು ವಿಚಾರಿಸಿದಾಗ ಅನುಮಾನಾಸ್ಪದವಾಗಿ ಕಂಡುಬಂದಿದ್ದು, ಆಕೆಯನ್ನು ಮಹಿಳಾ ಬಾಲಾಪರಾಧಿಗಳ ನಿವಾಸಕ್ಕೆ ಕಳುಹಿಸಲಾಗಿತ್ತು.
ಈ ವೇಳೆ, ಬಾಲಕಿ ತನ್ನನ್ನು ಮನಾಸ್ ಚೌಕದಿಂದ ಅಪಹರಣ ಮಾಡಿ ಒಂದೇ ದಿನದಲ್ಲಿ ಎರಡು ಬಾರಿ ಗ್ಯಾಂಗ್ ರೇಪ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾಳೆ. ಆರೋಪಿಗಳಲ್ಲಿ ನಾಲ್ವರು ಆಟೋ ಚಾಲಕರಿದ್ದು, ಇಬ್ಬರು ರೈಲ್ವೆ ನಿಲ್ದಾಣದ ಹಮಾಲರಾಗಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದನ್ನ ಓದಿ:ಪ್ರೀತ್ಸೆ ಅಂತಾ ಕಾಡಿದ್ದ ಪಾತಕಿ, ಆಕೆ ಒಪ್ಪದಿದ್ದಾಗ ಕೊನೆಗೆ ಪ್ರಾಣವನ್ನೇ ತೆಗೆದ..