ನವದೆಹಲಿ:ಕಳೆದ ಕೆಲ ತಿಂಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ದಾಖಲೆ ಮಟ್ಟದ ಹೆರಾಯಿನ್ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗ್ತಿದ್ದಾರೆ. ಇದೀಗ ದೆಹಲಿ ವಿಶೇಷ ಪೊಲೀಸ್ ಇಲಾಖೆ ದಾಖಲೆಯ 2,500 ಕೋಟಿ ರೂ. ಮೌಲ್ಯದ 350 ಕೆ.ಜಿ ಹೆರಾಯಿನ್ ವಶಕ್ಕೆ ಪಡೆದುಕೊಂಡಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಡಿಸಿಪಿ ಪ್ರಮೋದ್ ನೇತೃತ್ವದ ತಂಡ, 350 ಕೆ.ಜಿ ಹೆರಾಯಿನ್ ವಶಕ್ಕೆ ಪಡೆದುಕೊಂಡಿದ್ದು, ಇದರಲ್ಲಿ ಭಾಗಿಯಾಗಿದ್ದ ನಾಲ್ವರ ಬಂಧನ ಮಾಡಿದೆ. ಬಂಧಿತರಲ್ಲಿ ಮೂವರು ಹರಿಯಾಣ ಹಾಗೂ ಓರ್ವ ದೆಹಲಿ ಮೂಲದವನು ಎಂದು ತಿಳಿದು ಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬಂಧಿತ ಆರೋಪಿಗಳ ವಿಚಾರಣೆ ಮುಂದುವರೆದಿದ್ದು, ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ.