ಹೈದ್ರಾಬಾದ್: ಮಹಿಳೆಗೆ ಬೆದರಿಕೆ ಮತ್ತು ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಆರೋಪದ ಮೇಲೆ ಪೊಲೀಸ್ ಕಾನ್ಸ್ಟೇಬಲ್ ಓರ್ವರನ್ನು ಬಂಧಿಸಲಾಗಿದೆ. ಹೈದ್ರಾಬಾದ್ ಪೊಲೀಸ್ ಸ್ಪೆಷಲ್ ಬ್ರಾಂಚ್ನಲ್ಲಿ ಕೆಲಸ ಮಾಡುತ್ತಿದ್ದ ಕಾನ್ಸ್ಟೇಬಲ್ ತಮ್ಮ ನೆರೆಮನೆ ಮಹಿಳೆಗೆ ಕಿರುಕುಳ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ರಾಜಧಾನಿಯ ಸೈದಾಬಾದ್ ನಗರದಲ್ಲಿ ಕಳೆದ ಎಂಟು ವರ್ಷಗಳಿಂದ ಇವರಿಬ್ಬರು ಅಕ್ಕಪಕ್ಕದ ಮನೆಯಲ್ಲಿ ವಾಸ ಮಾಡುತ್ತಿದ್ದರು. ಈ ವೇಳೆ ಇವರ ಸಂಬಂಧ ಅಕ್ರಮಕ್ಕೆ ತಿರುಗಿತ್ತು.
ಇದರ ನಡುವೆ 2021ರ ಫೆಬ್ರವರಿಯಲ್ಲಿ ಮಹಿಳೆ ಕಾನ್ಸ್ಟೇಬಲ್ ವಿರುದ್ಧ ಭಾರತೀಯ ದಂಡ ಸಂಹಿತೆ ಅಡಿ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಇಲಾಖೆಯಿಂದ ಕಾನ್ಸ್ಟೇಬಲ್ನನ್ನು ಅಮಾನತು ಮಾಡಲಾಗಿತ್ತು. ಆರು ತಿಂಗಳ ಬಳಿಕ ಮತ್ತೆ ಆತ ಕರ್ತವ್ಯಕ್ಕೆ ಮರಳಿದ ಎಂದು ಮೀರ್ಪಿಟ್ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಆಗಸ್ಟ್ನಲ್ಲಿ ಕಾನ್ಸ್ಟೇಬಲ್ ಮಹಿಳೆ ಮನೆಗೆ ಹೋಗಿ, ಆಕೆಯ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿದ್ದ. ಈ ಸಂಬಂಧ ಮಹಿಳೆ ದೂರು ನೀಡಿದ್ದರು. ನ. 14ರಂದು ಈತ ಮತ್ತೆ ಆಕೆಯ ಮನೆಗೆ ನುಗ್ಗಿ, ಲೈಂಗಿಕ ಕಿರುಕುಳ ನೀಡುವ ಪ್ರಯತ್ನ ನಡೆಸಿದ್ದು, ಮಹಿಳೆ ವಿರೋಧಿಸಿದ್ದಾಳೆ. ಈ ಸಂಬಂಧ ಮಹಿಳೆ ಮತ್ತೆ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ವಿರುದ್ಧ ದೂರು ನೀಡಿದ್ದಾಳೆ.
ಇದನ್ನೂ ಓದಿ: ಮಹಿಳಾ ಸೇನಾಧಿಕಾರಿಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ: ಹಣ ದೋಚಿ ದುಷ್ಕರ್ಮಿಗಳು ಪರಾರಿ