ಮೋರ್ಬಿ(ಗುಜರಾತ್):ಮೋರ್ಬಿ ತೂಗು ಸೇತುವೆ ಕುಸಿತ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ತಾಯಿ ಹಂಸಾಬೆನ್ ದಾಭಿ ಮತ್ತು ಮಕ್ಕಳಾದ ತುಷಾರ್ (8 ವರ್ಷ), ಶ್ಯಾಮ್ (5 ವರ್ಷ) ಮತ್ತು ಮಾಯಾ (2 ವರ್ಷ) ಮೃತರೆಂದು ತಿಳಿದುಬಂದಿದೆ.
ಮೋರ್ಬಿ ತೂಗು ಸೇತುವೆ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರ ದುರ್ಮರಣ - gujarat morbi
ಗುಜರಾತ್‌ನ ಮೋರ್ಬಿಯಲ್ಲಿ ನಡೆದ ತೂಗು ಸೇತುವೆ ಕುಸಿತ ದುರಂತದಲ್ಲಿ ಮನ ಕಲಕಲಕುವ ದುರ್ಘಟನೆಯೊಂದು ನಡೆದಿದೆ.

morbi suspension bridge collapse accident
ಪತಿ ರೂಪೇಶಭಾಯಿ ದಾಭಿ ಎಂಬುವರು ತಮ್ಮ ಕುಟುಂಬಸಮೇತ ಸೇತುವೆಯ ಮೇಲೆ ಹೋಗಿದ್ದರು. ಸ್ವಲ್ಪ ಸಮಯದ ನಂತರ ಸೇತುವೆ ದಿಢೀರ್ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಇವರ ಪತ್ನಿ ಮತ್ತು ಮಕ್ಕಳು ನದಿಗೆ ಬಿದ್ದಿದ್ದಾರೆ. ರೂಪೇಶ್ ಈಜಿ ಪ್ರಾಣ ಉಳಿಸಿಕೊಂಡರು.
ಭೀಕರ ದುರ್ಘಟನೆಯಲ್ಲಿ ಇಲ್ಲಿಯವರೆಗೆ 132 ಮಂದಿ ಕೊನೆಯುಸಿರೆಳೆದಿದ್ದಾರೆ.