ಖಂಭಾಲಿಯಾ(ಗುಜರಾತ್): ದೇವಭೂಮಿ ದ್ವಾರಕಾ-ಖಂಭಾಲಿಯಾ ಹೆದ್ದಾರಿಯಲ್ಲಿ ತೀವ್ರ ಶೋಧಕಾರ್ಯದ ವೇಳೆ ಕಾರಿನಲ್ಲಿ ಭಾರಿ ಪ್ರಮಾಣದ ಡ್ರಗ್ಸ್ ಪತ್ತೆಯಾಗಿದೆ.
ಗುಜರಾತ್‌ನಲ್ಲಿ 350 ಕೋಟಿ ರೂಪಾಯಿ ಮೌಲ್ಯದ 66 ಕೆಜಿ ಡ್ರಗ್ಸ್ ವಶ - ಗುಜರಾತ್
ಗುಜರಾತ್‌ನ ದೇವಭೂಮಿ ದ್ವಾರಕಾ-ಖಂಭಾಲಿಯಾ ಹೆದ್ದಾರಿಯಲ್ಲಿ ತೀವ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು ಬರೋಬ್ಬರಿ 350 ಕೋಟಿ ರೂ.ಮೌಲ್ಯದ 66 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಗುಜರಾತ್‌ನಲ್ಲಿ 350 ಕೋಟಿ ರೂಪಾಯಿ ಮೌಲ್ಯದ 66 ಕೆಜಿ ಡ್ರಗ್ಸ್ ವಶ
ಖಂಭಾಲಿಯಾ ಆರಾಧನಾ ಧಾಮ್ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಅಂದಾಜು 66 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಇವರ ಬೆಲೆ 350 ಕೋಟಿ ರೂಪಾಯಿಗೂ ಹೆಚ್ಚು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಗುಜರಾತ್‌ನ ಕಚ್‌ನಲ್ಲಿರುವ ಮುಂದ್ರಾ ಬಂದರಿನಲ್ಲಿ 3,000 ಕೆಜಿ ಡ್ರಗ್ಸ್ ಪತ್ತೆಯಾಗಿತ್ತು.