ಕರ್ನಾಟಕ

karnataka

ETV Bharat / crime

ಮದುವೆಯಾದ ಮರುಕ್ಷಣವೇ ವಧುಗೆ ಕೈಕೊಟ್ಟು ವರ ಪರಾರಿ.. ಕಾರಣ ಬಲು ಮಜವಾಗಿದೆ.. - ಜೋಡಿಹೋಚಿಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿ

ಹತ್ತು ಜನಕ್ಕೆಂದು ಪರ್ಮಿಷನ್ ತಂದು ನೂರಾರು ಜನರು ಈ ಮದುವೆಯಲ್ಲಿ ಭಾಗಿ ಆಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿದ್ದಾರೆ. ಈ ವೇಳೆ ಜನರು ಕೂಡ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ..

groome-escaped
ವಧುವನ್ನು ಬಿಟ್ಟು ವರ ಪರಾರಿ

By

Published : May 25, 2021, 5:41 PM IST

ಚಿಕ್ಕಮಗಳೂರು‌ :ಅಧಿಕಾರಿಗಳನ್ನು ನೋಡಿದ ವರ, ವಧುವನ್ನು ಬಿಟ್ಟು ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ವಧುವನ್ನು ಬಿಟ್ಟು ವರ ಪರಾರಿ

ಓದಿ: ಮೈಸೂರಲ್ಲಿ ಮದುವೆ ದಿನವೇ ವಧುವಿಗೆ ಕೈಕೊಟ್ಟ ವರ: ಪ್ರಿಯತಮೆಯೊಂದಿಗೆ ಎಸ್ಕೇಪ್ ಆದ ಮದುಮಗ!

ವಧುವನ್ನ ಸ್ಟೇಜ್ ಮೇಲೆಯೇ ಬಿಟ್ಟು ವರ ಓಡಿ ಹೋಗಿದ್ದು, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕರಿಕಲ್ಲಳ್ಳಿಯಲ್ಲಿ ಈ ಘಟನೆ ನಡೆದಿದೆ.

ಕೋವಿಡ್ ನಿಯಮ ಉಲ್ಲಂಘಿಸಿ ಅದ್ಧೂರಿ ಮದುವೆ ಆಯೋಜನೆ ಮಾಡಲಾಗಿದ್ದು, ಅಧಿಕಾರಿಗಳನ್ನ ನೋಡುತ್ತಲೇ ಜನರು ಪರಾರಿಯಾಗಿದ್ದಾರೆ.

ಭರ್ಜರಿ ಭೋಜನವನ್ನೂ ಬಿಟ್ಟು ಜನರು ಎಸ್ಕೇಪ್ ಆಗಿದ್ದು, ಕೊರೊನಾ ನಡುವೆಯೂ ಅದ್ದೂರಿಯಾಗಿ ಈ ಜೋಡಿ ಮದುವೆ ಆಗುತಿತ್ತು.

ಹತ್ತು ಜನಕ್ಕೆಂದು ಪರ್ಮಿಷನ್ ತಂದು ನೂರಾರು ಜನರು ಈ ಮದುವೆಯಲ್ಲಿ ಭಾಗಿ ಆಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿದ್ದಾರೆ.

ಈ ವೇಳೆ ಜನರು ಕೂಡ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ಸ್ಥಳಕ್ಕೆ ಜೋಡಿಹೋಚಿಹಳ್ಳಿ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ABOUT THE AUTHOR

...view details