ಕರ್ನಾಟಕ

karnataka

ETV Bharat / crime

ನಡುರಸ್ತೆಯಲ್ಲೇ ಗ್ರಾಪಂ ಸದಸ್ಯನ ಕೊಚ್ಚಿ ಕೊಂದ ದುಷ್ಕರ್ಮಿಗಳು! - Murderi in ramnagara

ಗ್ರಾಪಂ ಸದಸ್ಯರೊಬ್ಬರನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ನಡುರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಬಿಡದಿ ಬಳಿ ನಡೆದಿದೆ.

Murder
Murder

By

Published : May 4, 2021, 11:35 PM IST

ರಾಮನಗರ: ಹಾಡಹಗಲೇ ಗ್ರಾಮ ಪಂಚಾಯಿತಿ ಸದಸ್ಯನನ್ನು ಭೀಕರವಾಗಿ ಕೊಲೆೆ ಮಾಡಿರುವ ಘಟನೆ ನಡೆದಿದೆ.

ಕೊಲೆಯಾದ ವ್ಯಕ್ತಿಯ ಹೆಸರು ಕುಮಾರ್. ಬಿಡದಿ ಹೋಬಳಿಯ ಮುತ್ತುರಾಯನಗುಡಿ ಪಾಳ್ಯ ಗ್ರಾಮದ ನಿವಾಸಿ. ಕೆಲವು ತಿಂಗಳ ಹಿಂದೆ ನಡೆದ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಬಿ. ಬನ್ನಿಕುಪ್ಪೆ ಗ್ರಾಪಂನಿಂದ ಸದಸ್ಯರಾಗಿ ಆಯ್ಕೆಯಾಗಿದ್ದರು.

ಗ್ರಾಮದಲ್ಲಿಯೂ ಜನರಿಗೆ ಸಣ್ಣಪುಟ್ಟ ಸಹಾಯ ಮಾಡಿಕೊಂಡಿದ್ದರು. ಇವತ್ತು ಬೆಳಗ್ಗೆ ಗ್ರಾಮದಿಂದ ಬಿಡದಿ ಕಡೆಗೆ ಬೈಕ್​ನಲ್ಲಿ ಬರುತ್ತಿದ್ದ ವೇಳೆ ಹೆಜ್ಜಾಲ ರಸ್ತೆಯಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಪಂಚಾಯತಿ ಸದಸ್ಯ ಕುಮಾರ್ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಮೊದಲಿಗೆ ಮುಚ್ಚಿನಿಂದ ಹಲ್ಲೆ ಮಾಡುವ ವೇಳೆ ತಪ್ಪಿಸಿಕೊಳ್ಳಲು ಕುಮಾರ್ ಪ್ರಯತ್ನ ಮಾಡಿದ್ದಾರೆ. ಆದರೆ, ಅಟ್ಟಾಡಿಸಿಕೊಂಡು ಬಂದ ಕೊಲೆಗಾರರು ನಡುರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಅಂದಹಾಗೆ, ಕೊಲೆಯಾದ ಕುಮಾರ್ ಪಂಚಾಯತಿ ಕೆಲಸದ ಜೊತೆಗೆ ಬೆಂಗಳೂರಿನ BWSSB ಕಚೇರಿಯಲ್ಲಿ ಕಾರು ಚಾಲಕನಾಗಿಯೂ ಕೆಲಸ ಮಾಡುತ್ತಿದ್ದರು. ಪಂಚಾಯತಿ ಚುನಾವಣೆಯಲ್ಲಿ ಗೆದ್ದಾಗಿನಿಂದಲೂ ಕುಮಾರ್​​ಗೆ ಸಾಕಷ್ಟು ಬೆದರಿಕೆ ಇತ್ತಂತೆ.

ಅದಕ್ಕಾಗಿಯೇ 20 ದಿನಗಳ ಹಿಂದೆಯೇ ನನಗೆ ಕೊಲೆ ಬೆದರಿಕೆ ಇದೆ. ನನಗೆ ಪ್ರಾಣ ರಕ್ಷಣೆ ಬೇಕು ಎಂದು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ದಾಖಲು ಮಾಡಿದ್ದರು.

ಕೊಲೆ ಮಾಡುವ ವ್ಯಕ್ತಿಗಳ ಹೆಸರನ್ನೂ ಸಹ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು. ಆದರೆ, ಕೊಲೆಗೆ ಸಂಚು ರೂಪಿಸಿದ್ದ ಆರೋಪಿಗಳು ಪತ್ತೆಯಾಗಿರಲಿಲ್ಲ. ಕೊಲೆಯಾದ ಬಳಿಕ ಆರೋಪಿಗಳ ಸಂಪೂರ್ಣ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಜಮೀನು ವಿವಾದ ಹಾಗೂ ಹಳೇ ವೈಷಮ್ಯ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ ಎನ್ನಲಾಗಿದೆ.

ಒಟ್ಟಾರೆಯಾಗಿ, ಜನ ಸೇವೆ ಕನಸು ಕಟ್ಟಿಕೊಂಡು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಗ್ರಾಪಂ ಸದಸ್ಯ ಬರ್ಬರವಾಗಿ ಕೊಲೆಯಾಗಿದ್ದಾರೆ. ಆದ್ರೆ, ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂಬುದು ಆರೋಪಿಗಳ ಬಂಧನದ ಬಳಿಕ ಗೊತ್ತಾಗಲಿದೆ.

ABOUT THE AUTHOR

...view details