ಹೈದಾರಾಬಾದ್:ತೆಲಂಗಾಣದ ವಿಕರಾಬಾದ್ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕೊಡಂಗಲ್ ಹೊರವಲಯದಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ.
ಎರಡು ಕಾರುಗಳ ನಡುವೆ ಡಿಕ್ಕಿ: ನಾಲ್ವರ ದುರ್ಮರಣ - ವಿಕರಾಬಾದ್ ಕ್ರೈಮ್ ನ್ಯೂಸ್
ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ವಿಕರಾಬಾದ್ ಜಿಲ್ಲೆಯ ಕೊಡಂಗಲ್ ಹೊರವಲಯದಲ್ಲಿ ಸಂಭವಿಸಿದೆ.
![ಎರಡು ಕಾರುಗಳ ನಡುವೆ ಡಿಕ್ಕಿ: ನಾಲ್ವರ ದುರ್ಮರಣ four people died in car accident in kodangal suburb vikarabad district](https://etvbharatimages.akamaized.net/etvbharat/prod-images/768-512-12187549-thumbnail-3x2-accident.jpg)
Accident: ಎರಡು ಕಾರುಗಳ ನಡುವೆ ಡಿಕ್ಕಿ; ನಾಲ್ವರ ದುರ್ಮರಣ
ಹೈದರಾಬಾದ್‌ನಿಂದ ಕರ್ನಾಟಕದತ್ತ ಸಾಗುತ್ತಿದ್ದ ವಾಹನವೊಂದು ಬಂಡಾ ಎಲ್ಲಮ್ಮ ದೇವಸ್ಥಾನದ ಬಳಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಕಾರುಗಳಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.