ಪಾಲ್ಘರ್ (ಮಹಾರಾಷ್ಟ್ರ):ಅಂಗಡಿ ಕಮ್ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಅಗ್ನಿ ಅವಘಡ ತಡರಾತ್ರಿ ಮೊದಲು ಅಂಗಡಿಗೆ ಬೆಂಕಿ ಹತ್ತಿಕೊಂಡಿದ್ದು, ಬಳಿಕ ಮನೆಗೆ ಆವರಿಸಿದೆ. ನಿದ್ರೆಗೆ ಜಾರಿದ್ದ ಗಂಗೂಬಾಯಿ ಮೋಲ್ (78), ಅವರ ಸೊಸೆ ದ್ವಾರಕಾ (46) ಮತ್ತು ಮೊಮ್ಮಕ್ಕಳಾದ ಪಲ್ಲವಿ (15) ಹಾಗೂ ಕೃಷ್ಣ (10) ಸಜೀವವಾಗಿ ಸುಟ್ಟು ಹೋಗಿದ್ದಾರೆ.
ಇದನ್ನೂ ಓದಿ: ಮನೆಗೆ ಬೆಂಕಿ ಬಿದ್ದು ನಾಲ್ವರ ಸಜೀವ ದಹನ: ಅನೇಕ ಜಾನುವಾರುಗಳೂ ಬಲಿ
ಅಂಗಡಿಯ ಮಾಲೀಕ ಅನಂತ್ (51) ಬೆಂಕಿ ನಂದಿಸಲು ಹೋಗಿ ಗಾಯಗೊಂಡಿದ್ದಾರೆ. ಇವರ ಮಕ್ಕಳಾದ ಭವೇಶ್ (17) ಮತ್ತು ಅಶ್ವಿನಿ (17) ಗಂಭೀರವಾಗಿ ಗಾಯಗೊಂಡಿದ್ದು, ಮೂವರನ್ನು ನಾಸಿಕ್ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಸುಯಿಯಾ ಗ್ರಾಮದ ಮನೆಯೊಂದಕ್ಕೆ ಬೆಂಕಿ ಬಿದ್ದು ನಾಲ್ವರು ಕುಟುಂಬ ಸದಸ್ಯರು ಮೃತಪಟ್ಟು, ಕೆಲವು ಜಾನುವಾರುಗಳು ಬಲಿಯಾಗಿದ್ದವು.