ಕರ್ನಾಟಕ

karnataka

ETV Bharat / crime

ಟ್ರಕ್​​, ಬೈಕ್​ಗೆ ಗುದ್ದಿದ ರೈಲು: ಐವರ ದುರ್ಮರಣ - ಉತ್ತರ ಪ್ರದೇಶ ರೈಲು ಅಪಘಾತ

ಉತ್ತರ ಪ್ರದೇಶದ ಶಹಜಹಾನ್ಪುರದ ಹುಲಸಂಗ್ರಾ ರೈಲ್ವೆ ಕ್ರಾಸಿಂಗ್ ಗೇಟ್ ಬಳಿ ಟ್ರಕ್ ಹಾಗೂ ಬೈಕ್​ಗಳಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿದ್ದಾರೆ.

Four killed and two injured in a train collision in Shahjahanpur
ಟ್ರಕ್​​, ಬೈಕ್​ಗೆ ಗುದ್ದಿದ ರೈಲು

By

Published : Apr 22, 2021, 10:42 AM IST

ಶಹಜಹಾನ್ಪುರ (ಉತ್ತರ ಪ್ರದೇಶ): ಟ್ರಕ್ ಹಾಗೂ ಎರಡು ಬೈಕ್​ಗಳಿಗೆ ಬರೇಲಿಯಿಂದ ಬರುತ್ತಿದ್ದ ಚಂಡೀಗಢ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ನಡೆದಿದೆ.

ಸಿಗ್ನಲ್ ವೈಫಲ್ಯದಿಂದಾಗಿ ಇಂದು ಮುಂಜಾನೆ 5.30ರ ವೇಳೆಗೆ ಹುಲಸಂಗ್ರಾ ರೈಲ್ವೆ ಕ್ರಾಸಿಂಗ್ ಗೇಟ್ ಬಳಿ ದುರಂತ ಸಂಭವಿಸಿದೆ. ಇನ್ನೂ ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಹಜಹಾನ್ಪುರದಲ್ಲಿ ರೈಲು ಅಪಘಾತ

ಇದನ್ನೂ ಓದಿ: ವಿಶಾಖಪಟ್ಟಣಂ ತಲುಪಿದ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲು - ವಿಡಿಯೋ

ಸ್ಥಳಕ್ಕೆ ದೌಡಾಯಿಸಿರುವ ಶಹಜಹಾನ್ಪುರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಪರಿಶೀಲನೆ ನಡೆಸಿ, ಸ್ಥಗಿತಗೊಂಡ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಿಸುತ್ತಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸುತ್ತಿರುವುದಾಗಿ ಎಸ್​ಪಿ ಎಸ್. ಆನಂದ್ ತಿಳಿಸಿದ್ದಾರೆ.

ಸಿಎಂ ಪರಿಹಾರ ಘೋಷಣೆ

ಸಾವಿಗೆ ಸಂತಾಪ ಸೂಚಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮೃತರ ಸಂಬಂಧಿಗಳಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.

ABOUT THE AUTHOR

...view details