ಕರ್ನಾಟಕ

karnataka

ETV Bharat / crime

ಮರಳುಗಾರಿಕೆಗೆಂದು ತೋಡಿದ್ದ ಗುಂಡಿಗೆ ಬಿದ್ದು ನಾಲ್ವರು ಮಕ್ಕಳ ಸಾವು - Four children killed in a pit dug for sand

ಸಿಂಧ್‌ಫನಾ ನದಿಯಲ್ಲಿ ಕಳೆದ ಹಲವು ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಮರಳು ತೆಗೆಯಲಾಗುತ್ತಿದೆ. ಪರಿಣಾಮ ಅಲ್ಲಲ್ಲಿ ಭಾಗೀ ತಗ್ಗು ನಿರ್ಮಾಣ ಆಗಿದ್ದು, ಈ ಮಕ್ಕಳು ತಗ್ಗಿನಲ್ಲಿದ್ದ ನೀರಿಗೆ ಮುಳುಗಿ ಸಾವಿಗೀಡಾಗಿದ್ದಾರೆ.

ಮರಳುಗಾರಿಕೆಗೆಂದು ತೋಡಿದ್ದ ಗುಂಡಿ
ಮರಳುಗಾರಿಕೆಗೆಂದು ತೋಡಿದ್ದ ಗುಂಡಿ

By

Published : Feb 7, 2022, 6:39 AM IST

ಬೀಡ್​(ಮಹಾರಾಷ್ಟ್ರ):ಮರಳುಗಾರಿಕೆಗೆಂದು ತೋಡಿದ್ದ ಗುಂಡಿಯಲ್ಲಿ ಬಿದ್ದು ನಾಲ್ಕು ಮಕ್ಕಳು ಸಾವಿಗೀಡಾದ ದಾರುಣ ಘಟನೆ ಜರುಗಿದೆ.

ಮೃತರನ್ನು ಗೆವ್ರಾಯಿ ತಾಲೂಕಿನ ಮದಲಮೋಹಿ ಜಿಲ್ಲಾ ಪರಿಷತ್ತಿನ ಶಹಜಾನ್‌ಪುರ ಚಕ್ಲಾದ ಬಬ್ಲು ಗುನಾಜಿ ವಕ್ತೆ, ಗಣೇಶ್ ಬಾಬುರಾವ್ ಇಂಕಾರ್, ಆಕಾಶ್ ರಾಮ್ ಸೋನಾವಾನೆ ಮತ್ತು ಅಮೋಲ್ ಸಂಜಯ್ ಕೋಲೇಕರ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ 9 ರಿಂದ 12 ವರ್ಷ ವಯಸ್ಸಿನವರಾಗಿದ್ದಾರೆ.

ಸಿಂಧ್‌ಫನಾ ನದಿಯಲ್ಲಿ ಕಳೆದ ಹಲವು ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಮರಳು ತೆಗೆಯಲಾಗುತ್ತಿದೆ. ಮರಳು ಮಾಫಿಯಾ ನದಿ ಪಾತ್ರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಈ ಮರಳು ದಂಧೆ ತಡೆಯುವಂತೆ ತಹಶೀಲ್ದಾರ್ ಹಾಗೂ ಎಸಿಗೆ ಹಲವು ಬಾರಿ ಈ ಸಂಬಂಧ ಹೇಳಿಕೆ ನೀಡಿದರಾದರೂ ಯಾವುದೇ ಕ್ರಮ ಆಗಿಲ್ಲ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಮರಳಿಗಾಗಿ ತೋಡಿದ್ದ ಗುಂಡಿಗೆ ಬಿದ್ದು ನಾಲ್ವರು ಮಕ್ಕಳ ಸಾವು

ಇದನ್ನೂ ಓದಿ: ಯಲಹಂಕ : ಗಾಂಜಾ ಮತ್ತಲ್ಲಿ ಯುವಕರ ನಡುವೆ ಫೈಟ್​​​.. ವಿಡಿಯೋ

ಈ ಸ್ಥಳದಿಂದ ದೊಡ್ಡ ಪ್ರಮಾಣದಲ್ಲಿ ಮರಳು ತೆಗೆಯಲಾಗುತ್ತಿದೆ. ನದಿ ಪಾತ್ರದಲ್ಲಿ ಮರಳು ಮಾಫಿಯಾ ಮಾಡುವುದರಿಂದ ಹಳ್ಳದಲ್ಲಿ ನೀರು ನಿಂತಿದೆ. ಈ ನೀರಿನಲ್ಲಿ ಮುಳುಗಿ ನಾಲ್ವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆಯ ನಂತರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಮರಳು ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಮೃತದೇಹಗಳನ್ನು ತೆಗೆದುಕೊಳ್ಳಲ್ಲ ಎಂದು ಪಟ್ಟು ಹಿಡಿದಿದ್ದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ABOUT THE AUTHOR

...view details