ಕರ್ನಾಟಕ

karnataka

ETV Bharat / crime

ಅಂತಾರಾಜ್ಯ ಹವಾಲಾ ದಂಧೆ: ಇಬ್ಬರ ಬಂಧನ, 4.5 ಕೋಟಿ ರೂ. ವಶ - Hawala Network

ಆರೋಪಿಗಳು ಹಣವನ್ನು ದೆಹಲಿಯಿಂದ ಗುಜರಾತ್‌ಗೆ ಸಾಗಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದು ಹವಾಲಾ ವ್ಯವಹಾರಕ್ಕೆ ಸಂಬಂಧಿಸಿದೆ ಎಂದು ಪೊಲೀಸರು ಶಂಕಿಸಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹವಾಲಾ ದಂಧೆ
ಹವಾಲಾ ದಂಧೆ

By

Published : May 22, 2021, 6:22 PM IST

Updated : Jun 11, 2021, 7:12 PM IST

ಡುಂಗರಪುರ: ಬಿಚಿವಾಡಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಸ್ಥಾನ-ಗುಜರಾತ್‌ನ ರತನ್‌ಪುರ ಗಡಿಯಲ್ಲಿ ತಪಾಸಣೆ ನಡೆಸುವಾಗ ಅಕ್ರಮವಾಗಿ ಕಾರಿನಲ್ಲಿ 4.5 ಕೋಟಿ ರೂ. ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ರತನ್​ಪುರ ಗಡಿಯಲ್ಲಿ ಉದಯಪುರದಿಂದ ಬರುತ್ತಿದ್ದ ಕಾರು ತಡೆದು ಶೋಧ ಕಾರ್ಯ ನಡೆಸಲಾಯಿತು. ಕಾರಿನ ಆಸನಗಳ ಕೆಳಗೆ ರಹಸ್ಯ ಕ್ಯಾಬಿನ್​ನಲ್ಲಿ ಕಂತೆ-ಕಂತೆ ನೋಟುಗಳನ್ನು ಇರಿಸಿದ್ದರು. ಕಾರಿನಲ್ಲಿದ್ದ ಪ್ರಯಾಣಿಕರಿಬ್ಬರಿಗೂ ನಗದು ಬಗ್ಗೆ ಪ್ರಶ್ನಿಸಿದ್ದಾಗ ಸರಿಯಾದ ಉತ್ತರ ನೀಡದೆ ತಡಬಡಿಸಿದರು. ತಕ್ಷಣವೇ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆತರಲಾಯಿತು ಎಂದು ಬಿಚಿವಾಡಾ ಪೊಲೀಸ್ ಠಾಣೆ ಅಧಿಕಾರಿ ಮೊಹಮ್ಮದ್ ರಿಜ್ವಾನ್ ಖಾನ್ ಹೇಳಿದ್ದಾರೆ.

ಅಂತರಾಜ್ಯ ಗಡಿಯಲ್ಲಿ ಹವಾಲಾ ದಂಧೆ

ನೋಟುಗಳು ತುಂಬಿದ ಕಾರು ಹಾಗೂ ಕಾರಿನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಕಾರಿನಲ್ಲಿ ಒಟ್ಟು 4 ಕೋಟಿ 49 ಲಕ್ಷ ರೂ. ನಗದು ಸಿಕ್ಕಿದೆ. ಬಂಧಿತರಲ್ಲಿ ಓರ್ವ ಗುಜರಾತ್‌ ಪಟಾನ್ ನಿವಾಸಿ ರಂಜಿತ್ ರಜಪೂತ್ ಮತ್ತು ಮತ್ತೋರ್ವ ಉಂಜಾ ನಿವಾಸಿ ನಿತಿನ್ ಪಟೇಲ್ ಎಂದು ತಿಳಿದುಬಂದಿದೆ.

ಆರೋಪಿಗಳು ಹಣವನ್ನು ದೆಹಲಿಯಿಂದ ಗುಜರಾತಿಗೆ ಸಾಗಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದು ಹವಾಲಾ ವ್ಯವಹಾರಕ್ಕೆ ಸಂಬಂಧಿಸಿದೆ ಎಂದು ಪೊಲೀಸರು ಶಂಕಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Last Updated : Jun 11, 2021, 7:12 PM IST

ABOUT THE AUTHOR

...view details