ಮಂಗಳೂರು: ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದ ಮುಖಂಡ ಶರಣ್ ಪಂಪ್ವೆಲ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರದ ಸಂದೇಶವನ್ನು ಫಾರ್ವರ್ಡ್ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಓದಿ: ಬಜರಂಗದಳ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ಅಪಪ್ರಚಾರ ; ದೂರು ದಾಖಲು

ಸುಳ್ಯ ತಾಲೂಕಿನ ಕಸಬಾದ ಭವಾನಿ ಶಂಕರ್ (32), ಮಂಗಳೂರಿನ ಬಜಾಲ್ನ ನೌಶಾದ್ (27), ಕಾವೂರಿನ ಟಿಕ್ಕಿ ರವಿ (38) ಮತ್ತು ಮೂಡಬಿದ್ರೆಯ ಜಯಕುಮಾರ್ (33) ಬಂಧಿತ ಆರೋಪಿಗಳು.
ಇತ್ತೀಚೆಗೆ ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಅವರು ಹುಡುಗಿಯೊಂದಿಗೆ ವಾಟ್ಸಾಪ್ ಚಾಟ್ ಮಾಡಿದಂತೆ ಸಂದೇಶಗಳನ್ನು ಸೃಷ್ಟಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಫಾರ್ವರ್ಡ್ ಮಾಡಲಾಗಿತ್ತು. ಯುವತಿಯನ್ನು ಲಾಡ್ಜ್ ಗೆ ಕರೆಯುವುದು ಸೇರಿದಂತೆ ಯುವತಿಯರನ್ನು ಇದೇ ರೀತಿ ಮಾಡಲಾಗಿದೆ ಎಂಬಂತೆ ಸಂದೇಶ ಸೃಷ್ಟಿಸಲಾಗಿತ್ತು.
ಈ ನಕಲಿ ಸಂದೇಶದ ವಿರುದ್ಧ ವಿಹಿಂಪ ಮುಖಂಡರು ದೂರು ನೀಡಿದ್ದಾರೆ. ಇದೀಗ ಈ ಸಂದೇಶವನ್ನು ಫಾರ್ವರ್ಡ್ ಮಾಡಿದ್ದ ನಾಲ್ವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.