ನವದಹೆಲಿ :ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋವಿಂದ್ ಪುರಿ ಪ್ರದೇಶದಲ್ಲಿ ನಡೆದಿದೆ. ಅಪಾರ್ಟ್‌ಮೆಂಟ್‌ನಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ರಂಜಿತ್ ಕುಮಾರ್(74) ಮತ್ತವರ ಪತ್ನಿ ಉಷಾ ಜೈನ್ (69) ಮೃತ ದೇಹಗಳು ಪತ್ತೆಯಾಗಿವೆ.
ನೇಣುಬಿಗಿದುಕೊಂಡು ದೆಹಲಿ ವಿವಿಯ ನಿವೃತ್ತ ಪ್ರೊಫೆಸರ್ ದಂಪತಿ ಆತ್ಮಹತ್ಯೆ - ದೆಹಲಿ
ದೆಹಲಿ ವಿವಿ ನಿವೃತ್ತ ಪ್ರಾಧ್ಯಾಪಕ ದಂಪತಿ ತಾವಿದ್ದ ಅಪಾರ್ಟ್‌ಮೆಂಟ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿಯ ಗೋವಿಂದ್ ಪುರಿ ಪ್ರದೇಶದಲ್ಲಿ ನಡೆದಿದೆ..
ನೇಣುಬಿಗಿದುಕೊಂಡು ದೆಹಲಿ ವಿವಿಯ ನಿವೃತ್ತ ಪ್ರೊಫೆಸರ್ ದಂಪತಿ ಆತ್ಮಹತ್ಯೆ
ಇವರ ಮನೆಯ ಕಾವಲುಗಾರ ಅಜಿತ್ ಮನೆ ಬೆಲ್ ಬಾರಿಸಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕೂಡಲೇ ಆತ ಮೃತರ ಪುತ್ರಿ ಅಂಕಿತಾ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾರೆ. ತಕ್ಷಣವೇ ಪುತ್ರಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸುದ್ದಿ ತಿಳಿಸಿದು ಸ್ಥಕ್ಕೆ ಬಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.