ಕರ್ನಾಟಕ

karnataka

ETV Bharat / crime

ಬಲವಂತವಾಗಿ ಮತಾಂತರಿಸಿ ಮದುವೆ, ಗ್ಯಾಂಗ್​ರೇಪ್: ಯುವತಿಯಿಂದ ದೂರು.. ಪೊಲೀಸರು ಹೇಳುವುದೇನು? - Forced conversion and marriage gang rape

ಜನವರಿ 14, 2020 ರಂದು ಆರೋಪಿಯಿಂದ ತಪ್ಪಿಸಿಕೊಂಡ ಆಕೆ ಮನೆಗೆ ಮರಳಿ ಬಂದಿದ್ದಳು. ಆದರೆ ಆರೋಪಿ ಅವರ ಕ್ಷಮೆಯಾಚಿಸಿ ಮತ್ತೆ ತನ್ನೊಂದಿಗೆ ಕರೆದುಕೊಂಡು ಹೋಗಿ ಫ್ಲಾಟ್‌ನಲ್ಲಿ ಇರಿಸಿದ್ದನಂತೆ. ಇಲ್ಲಿ ಪತಿ ಮತ್ತು ಆತನ ಸ್ನೇಹಿತರು ಸೇರಿಕೊಂಡು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.

ಬಲವಂತವಾಗಿ ಮತಾಂತರಿಸಿ ಮದುವೆ, ಗ್ಯಾಂಗ್​ರೇಪ್: ಯುವತಿಯಿಂದ ದೂರು
Forced conversion and marriage gang rape Complaint from young woman

By

Published : Nov 28, 2022, 1:43 PM IST

ಬುಲಂದ್ ಶಹರ್:ಯುವಕನೊಬ್ಬ ತನ್ನ ಹೆಸರು ಬದಲಾಯಿಸಿಕೊಂಡು ಗೆಳೆತನ ಬೆಳೆಸಿ, ನಂತರ ಬಲವಂತದಿಂದ ತನ್ನ ಧರ್ಮ ಪರಿವರ್ತನೆ ಮಾಡಿಸಿ ನಿಕಾ (ಮದುವೆ) ಮಾಡಿಕೊಂಡಿದ್ದಾನೆ. ಅಲ್ಲದೇ ತನ್ನ ಮೇಲೆ ಗ್ಯಾಂಗ್​ರೇಪ್ ಮಾಡಿಸಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ಬುಲಂದ್ ಶಹರ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಬುಲಂದ್‌ಶಹರ್‌ ನಿವಾಸಿಯಾಗಿರುವ ಯುವತಿಯ ಪ್ರಕಾರ- ಎಂಟು ವರ್ಷಗಳ ಹಿಂದೆ ನಗರದ ಯುವಕನೊಬ್ಬನೊಂದಿಗೆ ಆಕೆ ಸ್ನೇಹ ಬೆಳೆಸಿದ್ದಳು. ಅವನು ತನ್ನ ಹೆಸರನ್ನು ಶಿವಂ ಎಂದು ಹೇಳಿದ್ದ. ಆತ ಆಕೆಯ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದ. ನಂತರ ಆಕೆಯನ್ನು ಜನವರಿ 2016 ರಲ್ಲಿ ಗಾಜಿಯಾಬಾದ್‌ಗೆ ಕರೆದೊಯ್ದಿದ್ದ. ಆಗ ಆರೋಪಿ ಮುಸ್ಲಿಂ ಎಂಬುದು ಯುವತಿಗೆ ಗೊತ್ತಾಯಿತು.

ಆದರೆ ಆರೋಪಿಯು ಬಲವಂತವಾಗಿ ಆಕೆಯನ್ನು ಮತಾಂತರಗೊಳಿಸಿ ಮದುವೆಯಾದ. ನಂತರ 2019ರಲ್ಲಿ ಆರೋಪಿ ಪತ್ನಿಯನ್ನು ತನ್ನ ಮನೆಗೆ ಕರೆತಂದಿದ್ದ. ಇಲ್ಲಿ ಆರೋಪಿಯ ಕಿರಿಯ ಸಹೋದರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದನ್ನು ಪ್ರತಿಭಟಿಸಿದಾಗ ಆರೋಪಿಗಳು ಸಂತ್ರಸ್ತೆಯ ಅಶ್ಲೀಲ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಂತ್ರಸ್ತೆ ಈಗ ಎಸ್‌ಎಸ್‌ಪಿ ಕಚೇರಿಗೆ ದೂರು ಪತ್ರ ನೀಡಿದ್ದಾಳೆ.

ಜನವರಿ 14, 2020 ರಂದು ಆರೋಪಿಯಿಂದ ತಪ್ಪಿಸಿಕೊಂಡ ಆಕೆ ಮನೆಗೆ ಮರಳಿ ಬಂದಿದ್ದಳು. ಆದರೆ, ಆರೋಪಿಯು ಆಕೆಯ ಕ್ಷಮೆಯಾಚಿಸಿ ಮತ್ತೆ ತನ್ನೊಂದಿಗೆ ಕರೆದುಕೊಂಡು ಹೋಗಿ ಫ್ಲಾಟ್‌ನಲ್ಲಿ ಇರಿಸಿದ್ದನಂತೆ. ಇಲ್ಲಿ ಪತಿ ಮತ್ತು ಆತನ ಸ್ನೇಹಿತರು ಸೇರಿಕೊಂಡು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಹೇಳಿದ್ದಾಳೆ.

ಈ ಬಗ್ಗೆ ಎಸ್‌ಎಸ್‌ಪಿಗೆ ಮನವಿ ಸಲ್ಲಿಸಿದ್ದೇನೆ ಎಂದು ಸಂತ್ರಸ್ತೆ ಹೇಳಿದ್ದಾಳೆ. ಆದರೆ, ಅಂಥ ಯಾವುದೇ ದೂರು ನನ್ನ ಅರಿವಿಗೆ ಬಂದಿಲ್ಲ ಎಂದು ಎಸ್‌ಎಸ್‌ಪಿ ಶ್ಲೋಕ್‌ ಕುಮಾರ್‌ ತಿಳಿಸಿದ್ದಾರೆ. ದೂರು ಬಂದರೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಗ್ಯಾಂಗ್​​ರೇಪ್​​ ಆರೋಪಿಗಳ ಮನೆಯನ್ನು ಜೆಸಿಬಿಯಿಂದ ಧ್ವಂಸಗೊಳಿಸಿದ ಜಿಲ್ಲಾಡಳಿತ

ABOUT THE AUTHOR

...view details