ಕರ್ನಾಟಕ

karnataka

ETV Bharat / crime

ಮರಕ್ಕೆ ಗುದ್ದಿದ ವ್ಯಾನ್​: ಸ್ಥಳದಲ್ಲೇ ಐವರು ಮಹಿಳೆಯರ ದುರ್ಮರಣ - ಛತ್ತೀಸ್​ಗಡ ರಸ್ತೆ ಅಪಘಾತ ಸುದ್ದಿ

ಛತ್ತೀಸ್​ಘಡದ ಗರಿಯಾಬಂದ್ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

gariaband
ಗರಿಯಾಬಂದ್ ರಸ್ತೆ ಅಪಘಾತದಲ್ಲಿ ಐವರ ದುರ್ಮರಣ

By

Published : Jun 13, 2021, 9:01 AM IST

ಗರಿಯಾಬಂದ್ (ಛತ್ತೀಸ್​ಘಡ): ಮಾರುತಿ ಈಕೋ ವ್ಯಾನ್ ಮರಕ್ಕೆ ಗುದ್ದಿ ಸ್ಥಳದಲ್ಲೇ ಐವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಛತ್ತೀಸ್​ಘಡದ ಗರಿಯಾಬಂದ್ ಜಿಲ್ಲೆಯಲ್ಲಿ ನಡೆದಿದೆ.

ಅಪಘಾತದಲ್ಲಿ ಇನ್ನೂ ಆರು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ರಾಯ್‌ಪುರದ ಅಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗರಿಯಾಬಂದ್ ರಸ್ತೆ ಅಪಘಾತದಲ್ಲಿ ಐವರ ದುರ್ಮರಣ

ನಿನ್ನೆ ರಾತ್ರಿ ರಾಯ್‌ಪುರದ ಧೋರಾ ಕೊನಾರಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಗರಿಯಾಬಂದ್‌ನ ಮಾಲ್ಗಾಂವ್‌ಗೆ ವ್ಯಾನ್​ನಲ್ಲಿ ಹಿಂದಿರುಗುತ್ತಿದ್ದರು. ಚಾಲಕ ನಿದ್ದೆ ಮಂಪರಿನಲ್ಲಿ ವಾಹನ ಚಲಾಯಿಸುತ್ತಿದ್ದದೇ ದುರಂತಕ್ಕೆ ಕಾರಣ ಎನ್ನಲಾಗಿದೆ.

ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಗಾಯಾಳುಗಳ ಪೈಕಿ ಒಬ್ಬರನ್ನು ಬಿಟ್ಟು ಉಳಿದವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ABOUT THE AUTHOR

...view details