ಕರ್ನಾಟಕ

karnataka

ETV Bharat / crime

ಎಂಪಿ, ಯುಪಿ ಬಳಿಕ ಆಂಧ್ರದಲ್ಲಿ ರಸ್ತೆ ದುರಂತ: ಐವರು ಬಲಿ

ಮಧ್ಯಪ್ರದೇಶ, ಉತ್ತರ ಪ್ರದೇಶದ ಬಳಿಕ ಆಂಧ್ರಪ್ರದೇಶದಲ್ಲಿ ಇಂದು ರಸ್ತೆ ಅಪಘಾತ ನಡೆದಿದ್ದು, ಐವರು ಮೃತಪಟ್ಟಿದ್ದಾರೆ.

Five died in road accident at Andhra's Nellore
ಎಂಪಿ, ಯುಪಿ ಬಳಿಕ ಆಂಧ್ರದಲ್ಲಿ ರಸ್ತೆ ಅಪಘಾತ

By

Published : Mar 23, 2021, 10:28 AM IST

ನೆಲ್ಲೂರು (ಆಂಧ್ರಪ್ರದೇಶ):ಕೂಲಿ ಕಾರ್ಮಿಕರನ್ನು ಹತ್ತಿಸಿಕೊಳ್ಳುತ್ತಿದ್ದ ಕಾರಿಗೆ ಹಾಲಿನ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಐವರು ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.

ನೆಲ್ಲೂರು ಜಿಲ್ಲೆಯ ಸಂಗಮ ಮಂಡಲದ ನೆಲ್ಲೂರು - ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಒಬ್ಬರು ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಹಾಲಿನ ವ್ಯಾನ್ ಚಾಲಕ ಸೇರಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: 13 ಮಂದಿ ದುರ್ಮರಣ

ಮೃತರೆಲ್ಲರೂ ಕೂಲಿಗಾಗಿ ಮೀನುಗಾರಿಕೆಗೆ ಮಾಡಲು ತೆರಳುತ್ತಿದ್ದರು. ಘಟನಾ ಸ್ಥಳಕ್ಕೆ ಬಂದ ಪೊಲೀಸ್​ ಇನ್ಸ್​ಪೆಕ್ಟರ್​ ಶ್ರೀಕಾಂತ್, ಸರ್ಕಲ್​ ಇನ್ಸ್​ಪೆಕ್ಟರ್​ ಸುರೇಶ್ ಬಾಬು ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಅಯೋಧ್ಯಾ ಫ್ಲೈಓವರ್‌ನಲ್ಲಿ ನಿಂತಿದ್ದ ಬಸ್​ಗೆ ಟ್ರಕ್​ ಡಿಕ್ಕಿ: ಆರು ಮಂದಿ ಸಾವು

ಇಂದು ಬೆಳಗ್ಗೆಯಿಂದ ವರದಿಯಾಗಿರುವ ಮೂರನೇ ಭೀಕರ ರಸ್ತೆ ಅಪಘಾತ ಸುದ್ದಿ ಇದಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿಬಸ್ - ಆಟೋ ಡಿಕ್ಕಿಯಾಗಿ 13 ಜನರು ಸಾವನ್ನಪ್ಪಿದ್ದರು. ಬಳಿಕ ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ಫ್ಲೈಓವರ್‌ನಲ್ಲಿ ನಿಂತಿದ್ದ ಬಸ್​ಗೆ ಟ್ರಕ್​ ಹೊಡೆದು ಆರು ಮಂದಿ ಮೃತಪಟ್ಟಿದ್ದರು.

ABOUT THE AUTHOR

...view details